ಕೆ.ಎಸ್ ಗೌಡ ಸಮೂಹ ವಿದ್ಯಾ ಸಂಸ್ಥೆಗಳ ವಾರ್ಷಿಕೋತ್ಸವದ ಸಮಾಲೋಚನಾ ಸಭೆ

0


ಕೆ.ಎಸ್ ಗೌಡ ಸಮೂಹ ವಿದ್ಯಾಸಂಸ್ಥೆಗಳು, ವರ್ಷ ನಗರ ನಿಂತಿಕಲ್ಲು ಇದರ ವಾರ್ಷಿಕೋತ್ಸವದ ಸಮಾಲೋಚನಾ ಸಭೆ ನಿರ್ದೇಶಕರಾದ ಕುಮಾರಸ್ವಾಮಿ ಕೆ.ಎಸ್ ಇವರ ಅಧ್ಯಕ್ಷತೆಯಲ್ಲಿ ಡಿ. 02ರಂದು ನಡೆಯಿತು. ಸಮೂಹ ವಿದ್ಮಾ ಸಂಸ್ಥೆಗಳ ಕಾರ್ಯಕ್ರಮ ಅಧಿಕಾರಿ, ಪ್ರಸನ್ನ ವೈ. ಟಿ. ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು.

ಡಿ. 06ರಂದು ಶ್ರೀ ಪರಿವಾರ ಪಂಚಲಿಂಗೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ, ಕೆ.ಎಸ್ ಗೌಡ ಪದವಿಪೂರ್ವ ಕಾಲೇಜು, ಕೆ.ಎಸ್ ಗೌಡ ಪ್ರೌಢ ಶಾಲೆ ಹಾಗೂ ಕೆ.ಎಸ್ ಗೌಡ ಪ್ರಾಥಮಿಕ ಶಾಲೆ, ಹೀಗೆ ನಾಲ್ಕು ವಿದ್ಯಾಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ ಏಕಕಾಲದಲ್ಲಿ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಸುಳ್ಯ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾದಸೂಫಿ ಪೆರಾಜೆ ಯವರು ಮುಖ್ಯ ಅತಿಥಿಯಾಗಿದ್ದು, ಶ್ರೀ ಸೀತಾರಾಮಾಂಜನೇಯ ಸೇವಾ ಪ್ರತಿಷ್ಠಾನ, ಕೋಟಿ ಚೆನ್ನಯ ನಗರ ಎಣ್ಮೂರು ಇದರ ಅಧ್ಯಕ್ಷರಾದ ರಘುನಾಥ ರೈ ಕಟ್ಟ ಬೀಡು ಧ್ವಜಾರೋಹಣ ಗೈಯಲಿದ್ದಾರೆ. ಡಿ. 16ರಂದು ನಾಲ್ಕು ವಿದ್ಮಾಸಂಸ್ಥೆಗಳ ವಾರ್ಷಿಕೋತ್ಸವ, ” ವರ್ಷ ವೈಭವ” ನಡೆಯಲಿದ್ದು, ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರಿ ಸಂಘ ಎಣ್ಮೂರು ಇದರ ಅಧ್ಯಕ್ಷೆ ಶ್ರೀಮತಿ ಕೆ. ಜಿ. ಕುಸುಮಾವತಿ ರೈ ಗುತ್ತು ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿಯಾದ ಕು. ಭಾಗೀರಥಿ ಮುರುಳ್ಯ, ಸರಕಾರಿ ಪದವಿ ಪೂರ್ವ ಕಾಲೇಜು ಗಾಂಧಿ ನಗರ ಸುಳ್ಯ ಇದರ ಪ್ರಾಚಾರ್ಯರಾದ ಅಬ್ದುಲ್ ಸಮದ್, ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಶ್ ಕುಮಾರ್ ಕರಿಕ್ಕಳ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಆಡಳಿತ ಮಂಡಳಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಕೆ ಎಸ್ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ನಂತರ ಸಮೂಹ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ.

ಅಧ್ಯಕ್ಷತೆ ವಹಿಸಿದ್ದ ಕುಮಾರಸ್ವಾಮಿ ಕೆ ಎಸ್ ಕಾರ್ಯಕ್ರಮದ ಬಗ್ಗೆ ನಿರ್ದೆಶನ ನೀಡಿದರು. ಸಮೂಹ ವಿದ್ಯಾ ಸಂಸ್ಥೆಗಳ ಪ್ರಾಚಾರ್ಯರು, ಮುಖ್ಯೋಪಾಧ್ಯಾಯರು, ಉಪನ್ಯಾಸಕರು , ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿ ಸಭೆಯಲ್ಲಿ ಹಾಜರಿದ್ದರು.