ಕೇರ್ಪಡ ಮಹಿಷಮರ್ದಿನಿ ದೇವಸ್ಥಾನದ ಜಾತ್ರೋತ್ಸವದ ಆಮಂತ್ರಣ ಬಿಡುಗಡೆ

0


ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಕಾಲಾವಧಿ ಜಾತ್ರೋತ್ಸವವು ಡಿ.15 ಮತ್ತು 16 ರಂದು ನಡೆಯಲಿದ್ದು, ಆಮಂತ್ರಣ ಪತ್ರವನ್ನು ಇಂದು ದೇವಳದಲ್ಲಿ ಬಿಡುಗಡೆ ಮಾಡಲಾಯಿತು.
ದೇವಳದ ಪ್ರಧಾನ ಅರ್ಚಕ ಶ್ರೀ ಹರಿ ಕುಂಜೂರಾಯ ವೈದಿಕ ಕಾರ್ಯಕ್ರಮ ನೆರವೇರಿಸಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ವೆಂಕಪ್ಪ ಗೌಡ ಆಲಾಜೆ , ಸಮಿತಿಯ ಸದಸ್ಯರು, ಸೇವಾ ಸಮಿತಿಯ ಸದಸ್ಯರು, ಭಕ್ತಾಧಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಡಿ.8ರಂದು ಗೊನೆ ಮುಹೂರ್ತ ನಡೆಯುವುದರೊಂದಿಗೆ ಜಾತ್ರೋತ್ಸವ ಆರಂಭಗೊಳ್ಳಲಿದೆ.