ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಗಳಿಸುವಲ್ಲಿ ಉದಯಶಂಕರ ಭಟ್ ಮಾಲಕತ್ವದ ಈ ರಕ್ಷಾ ಸುಬ್ರಹ್ಮಣ್ಯ ತಂಡ ಯಶಸ್ವಿಯಾಯಿತು. ದ್ವಿತೀಯ ಸ್ಥಾನವನ್ನು ಉಮೇಶ ಕೆ.ಎನ್. ಮಾಲಕತ್ವದ ಪ್ರಶಾಂತ್ ಸ್ಪೋರ್ಟ್ಸ್ ಕ್ಲಬ್ ಸುಬ್ರಹ್ಮಣ್ಯ ಪಡೆಯಿತು.
ತೃತಿಯ ಸ್ಥಾನವನ್ನು ಜೀವನ್ ಮಾಲಕತ್ವದ ತಸ್ವಿಕ ಫ್ರೆಂಡ್ಸ್ ಸುಬ್ರಹ್ಮಣ್ಯ ಗಳಿಸಿತು. ಒಟ್ಟು ಆರು ತಂಡಗಳು ಲೀಗ್ ಮಾದರಿಯ ಹೊನ್ನಲು ಬೆಳಕಿನ ಪಂದ್ಯಾಟದಲ್ಲಿ ಭಾಗವಹಿಸಿದ್ದು ಸಂಜೆ ಆರು ಗಂಟೆಯಿಂದ ಪಂದ್ಯಾಟಗಳು ಆರಂಭವಾಗಿ ರಾತ್ರಿ 3:00 ತನಕ ಮುಂದುವರೆಯಿತು.
ಕೊನೆಯಲ್ಲಿ ಸಮಾರೋಪ ಸಮಾರಂಭದಲ್ಲಿ ಕುಕ್ಕೆ ಶ್ರೀ ಫ್ರೆಂಡ್ಸ್ ಸುಬ್ರಹ್ಮಣ್ಯದ ಅಧ್ಯಕ್ಷ ಭವಿಷ್, ಉದ್ಯಮಿ ನಾನಯ್ಯ ದಂಪತಿಗಳು, ದೈಹಿಕ ಶಿಕ್ಷಣ ನಿರ್ಧೇಶಕ ರಾಧಾಕೃಷ್ಣ ಚಿದ್ಗಲ್, ಮೋಹಿತ್ ಜೇನು ಕೋಡಿ, ದೀಪಕ್ ನಂಬಿಯಾರ್ ,ವಿಜೇತರಿಗೆ ಬಹುಮಾನಗಳನ್ನು ವಿತರಿಸಿದ್ದರು. ಉತ್ತಮ ಹೊಡೆತಕ್ಕಾಗಿ ಪ್ರಶಾಂತ್ ಸ್ಪೋರ್ಟ್ಸ್ ಕಬ್ಬಿನ ಆದರ್ಶ, ಉತ್ತಮ ಎತ್ತುವಿಕೆಗಾಗಿ ಶ್ರೀ ರಕ್ಷಾ ತಂಡದ ದಂಡೇಶ್, ಹಾಗೂ ಸರ್ವಾಂಗೀಣ ಆಟಗಾರನಾಗಿ ಶ್ರೀ ರಕ್ಷಾ ತಂಡದ ಸೋಮಶೇಖರ್ ವೈಯಕ್ತಿಕ ಬಹುಮಾನಗಳನ್ನು ಪಡೆದರು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಕ್ಕೆ ಶ್ರೀ ಫ್ರೆಂಡ್ಸ್ ಸುಬ್ರಹ್ಮಣ್ಯ ಇದರ ಅಧ್ಯಕ್ಷರಾದ ಭವಿಷ್ಯ ವಹಿಸಿದ್ದರು. ಪಂದ್ಯಾಟದ ಉದ್ಘಾಟನೆಯನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಶ್ರೀ ವತ್ಸ ಅವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕಡಬ ತಾಲೂಕ್, ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷರಾದ ಲಕ್ಷ್ಮೀ ನಾರಾಯಣ ರಾವ್ ರಾಮಕುಂಜ, ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಚ್ಎಲ್ ವೆಂಕಟೇಶ್, ತಾಲೂಕು ಪಂಚಾಯತ್ ನಿಕಟ ಪೂರ್ವ ಸದಸ್ಯ ಅಶೋಕ್ ನೇ ಕ್ರಾಜೆ, ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಇಂಜಾಡಿ ,ಸಮಾಜ ಸೇವಕರಾದ ಡಾl ರವಿ ಕಕ್ಕೆ ಪದವು , ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಮುಖ್ಯೋಪಾಧ್ಯಾಯ ಮಾಧವ ಎಂ ಉಪಸ್ಥಿತರಿದ್ದು ಪಂದ್ಯಾಟಕ್ಕೆ ಶುಭಹಾರೈಸಿರುವರು .ಇದೇ ಸಂದರ್ಭದಲ್ಲಿ ಎಸ್ ಎಸ್ ಪಿ ಯು ಸಿ ಕಾಲೇಜಿನ ವಿದ್ಯಾರ್ಥಿನಿ ಗುಡ್ಡಗಾಡು ಓಟದಲ್ಲಿ ಎರಡನೇ ಬಾರಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾದ ಶ್ರದ್ಧ ಅವರನ್ನು ಸನ್ಮಾನಿಸಲಾಯಿತು. ಕುಕ್ಕೆ ಫ್ರೆಂಡ್ಸ್ ಸುಬ್ರಹ್ಮಣ್ಯ ಇದರ ಕಾರ್ಯದರ್ಶಿ ರಶಿನ್ ಸುಬ್ರಮಣ್ಯ ಸ್ವಾಗತಿಸಿದರು. ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿಶ್ರಾಂತ ಉಪನ್ಯಾಸಕ ವಿಶ್ವನಾಥ ನಡು ತೋಟ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.