ಜೇನುಗೂಡು ತಂಡ ಮಕ್ಕಳಿಗಾಗಿ ಆಯೋಜಿಸಿದ ಜಿಲ್ಲಾ ಮಟ್ಟದ ‘ಭಜನೆ ಮಲ್ಪುಗ’ ಆನ್ಲೈನ್ ಎಂಬ ತುಳು ಭಾಷಾ ಭಜನಾ ಸ್ಪರ್ಧೆಯಲ್ಲಿ ವಿಶೇಷ ಚೇತನ ಪ್ರತಿಭೆ ನಿಶ್ಮಿತಾ ಬಳ್ಳಡ್ಕ ಭಾಗವಹಿಸಿ ವಿಶೇಷ ಆಯ್ಕೆಯಾಗಿ ಡಿ.3 ರಂದು ಮಂಗಳೂರಿನ ಜೆಪ್ಪು ಅರೆಕೆರೆಬೈಲು ಅಂಬಾ ಮಹೇಶ್ವರಿ ಭಜನಾ ಮಂಡಳಿಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ‘ವಿಶೇಷ ಚೇತನ ಪ್ರತಿಭಾ ಪುರಸ್ಕಾರ’ ಪಡೆದುಕೊಂಡರು.
ಮುಳ್ಯ ಅಟ್ಲೂರು ಸ. ಉ.ಹಿ. ಪ್ರಾ. ಶಾಲೆಯಲ್ಲಿ 3ನೇ ತರಗತಿ ವಿದ್ಯಾರ್ಥಿಯಾಗಿರುವ ನಿಶ್ಮಿತಾರವರು ಸುಳ್ಯ ಜ್ಯೋತಿ ಸರ್ಕಲ್ ನಲ್ಲಿ ರಿಕ್ಷಾ ಚಾಲಕರಾಗಿರುವ ಬಳ್ಳಡ್ಕ ವಸಂತ ಮತ್ತು ಶ್ರೀಮತಿ ಭಾರತಿ ದಂಪತಿಗಳ ಪುತ್ರಿ.
ಪ್ರಸ್ತುತ ನಿಶ್ಮಿತಾ ಸುಳ್ಯದ ಸಾಹಿತ್ಯ ಸಂಗೀತ ಕಲಾ ಕೇಂದ್ರದಲ್ಲಿ ಆರತಿ ಪುರುಷೋತಮ್ ಕೇರ್ಪಳ ರ ಬಳಿ ಸಂಗೀತಾ ಅಭ್ಯಾಸ ಮಾಡುತ್ತಿದ್ದಾರೆ.