ಸುಳ್ಯ ಸೈಂಟ್ ಜೋಸೆಫ್ ಶಾಲೆಯಲ್ಲಿ ಪ್ರಾಥಮಿಕ ಶಾಲಾ ಸಂಸತ್ತು ಸಭೆ

0

ಸುಳ್ಯ ಸೈಂಟ್ ಜೋಸೆಫ್ ಶಾಲೆಯಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಸಂಸತ್ತು ಸಭೆಯು ಶಾಲಾ ಸಭಾಂಗಣದಲ್ಲಿ ನಡೆಯಿತು.
ಶಾಲಾ ನಾಯಕಿ ಹೈನಾ ತಸ್ನೀನ್ ,ಉಪನಾಯಕ ಮೊಹಮ್ಮದ್ ಹಫೀಝ್,ಆಡಳಿತ ಪಕ್ಷದ ಎಲ್ಲಾ ಮಂತ್ರಿಗಳು, ವಿರೋಧ ಪಕ್ಷದ ನಾಯಕ ಮೊಹಮ್ಮದ್ ರಝೀನ್ ಹಾಗೂ ಸದಸ್ಯರು, ಹಾಗೂ ಪ್ರಾಥಮಿಕ ಶಾಲಾ ಸಂಸತ್ತಿನ ಸ್ಪೀಕರ್ ಶ್ರೇಯಸ್ ಕೆ ಪಿ , ಗವರ್ನರ್ ಶ್ರೀಮಾ ಎಂ ಬಿ , ಕಾರ್ಯದರ್ಶಿಗಳಾದ ಅನುಜ್ಞಾ ಕೆ ಎಂ ರವರನ್ನೊಳಗೊಂಡ ಮಂತ್ರಿಮಂಡಲದ ಕಾರ್ಯಕಲಾಪ ನಡೆಯಿತು.


ಈ ಸಭೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ
ಸಿ.ಬಿನೋಮ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕಿಯರಾದ ಶ್ರೀಮತಿ ಲತಾ ಹಾಗೂ ಶ್ರೀಮತಿ ಗೀತಾಲಕ್ಷ್ಮಿ ಯವರು ಸಹಕರಿಸಿದರು.