ಆಲೆಟ್ಟಿ ಗ್ರಾಮದಲ್ಲಿರುವ ಕುಂಚಡ್ಕ ಮನೆತನದ ಐನ್ ಮನೆಯ ಮಹಾಲಕ್ಷ್ಮೀ ಭವನದಲ್ಲಿ ಡಿ.3 ರಿಂದ 5 ರ ತನಕ ಶ್ರೀ ಮಹಾಲಕ್ಷ್ಮಿ ಪೂಜೆ
ಶ್ರೀ ವೆಂಕಟರಮಣ ದೇವರ ಹರಿಸೇವೆಯೊಂದಿಗೆ
ಶ್ರೀ ವಿಷ್ಣುಮೂರ್ತಿ ಮತ್ತು ಶ್ರೀ ಧರ್ಮದೈವ ಹಾಗೂ ಉಪದೈವಗಳ ನಡಾವಳಿಯು ವಿಜ್ರಂಭಣೆಯಿಂದ ಜರುಗಿತು.
ಡಿ. 3 ರಂದು ರಾತ್ರಿ ಶ್ರೀ ದೈವಗಳ ನಡಾವಳಿಗೆ ಕೂಡಿ ಮರುದಿನ ಪ್ರಾತ:ಕಾಲದಿಂದ ಶ್ರೀ ಉಳ್ಳಾಕುಲು, ಮುಡ ಚಾಮುಂಡಿ ,
ಶ್ರೀಧೂಮಾವತಿ ,ಭವನ,ಕುಪ್ಪೆ ಪಂಜುರ್ಲಿ, ನೆಲ್ಲೂರಾಯ, ಕೊರಗರು, ಪುರುಷ, ಮೂವ, ಮತಿ ಮುದ್ದ,ಅಂಗಾರ ಬಾಕುಡ, ಕೂಜಿ ದೈವಗಳ ನಡಾವಳಿಯು ಜರುಗಿತು.
ಈ ಸಂದರ್ಭದಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ಸಮಯದಲ್ಲಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.
ಅದೇ ದಿನ ರಾತ್ರಿ ಶ್ರೀ ವಿಷ್ಣುಮೂರ್ತಿ ದೈವದ ತೊಡಂಞಲ್ ಮತ್ತು ಕುಳ್ಚಾಟವಾಗಿ
ಗುರುಕಾರ್ನೋರ್ , ದೇವತೆ ಹಾಗೂ ವರ್ಣಾರ ಪಂಜುರ್ಲಿ ದೈವಗಳ ನಡಾವಳಿಯು ನಡೆಯಿತು.
ಮರುದಿನ ಬೆಳಗ್ಗೆ ಶ್ರೀ ರಕ್ತೇಶ್ವರೀದೈವ,ಶ್ರೀವಿಷ್ಣುಮೂರ್ತಿ ದೈವ ,
ಶ್ರೀ ಧರ್ಮದೈವ ಹಾಗೂ ಶ್ರೀ ಪಾಷಾಣಮೂರ್ತಿ ದೈವಗಳ ನಡಾವಳಿಯು ನಡೆಯಿತು.
ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಗಿ
ಅನ್ನಸಂತರ್ಪಣೆಯು ನೆರವೇರಿತು.
ಅಪರಾಹ್ನ ಶ್ರೀ ಗುಳಿಗ ದೈವದ ಕೋಲವಾಗಿ ಶ್ರೀ ಧರ್ಮದೈವದ
ಅನ್ನ ಪ್ರಸಾದ ವಿತರಣೆಯಾಯಿತು. ಮೂರು ದಿನಗಳ ಕಾಲ ನಡೆದ ಶ್ರೀ ದೈವಗಳ ಕೋಲಕ್ಕೆ ಊರಿನ ಹಾಗೂ ಪರ ಊರಿನ ಬಂಧು ಮಿತ್ರರು ಆಗಮಿಸಿದ್ದರು.
ಕುಂಚಡ್ಕ ಕುಟುಂಬದ ಯಜಮಾನರಾದ ಕೆ.ಎಂ.ವೆಂಕಪ್ಪ ಗೌಡ ಕುಂಚಡ್ಕ , ಆಡಳಿತ ಸಮಿತಿ ಅಧ್ಯಕ್ಷ ಪೂವಯ್ಯ ಗೌಡ ಕುಂಚಡ್ಕ, ಸದಸ್ಯರಾದ ತಾ.ಪಂ.ಮಾಜಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಆಲೆಟ್ಟಿ ಪಂಚಾಯತ್ ಮಾಜಿ ಅಧ್ಯಕ್ಷ ಧನಂಜಯ ಕುಂಚಡ್ಕ, ಆಲೆಟ್ಟಿ ಸದಾಶಿವ ದೇವಸ್ಥಾನದ ವ್ಯ.ಸ.ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ,ಹಿರಿಯರಾದ ದೊಡ್ಡಯ್ಯ ಗೌಡ ಕುಂಚಡ್ಕ, ಕೊರಗಪ್ಪ ಮಾಸ್ತರ್ ಕುಂಚಡ್ಕ,
ರಾಮಣ್ಣ ಗೌಡ ಕುಂಚಡ್ಕ, ವೆಂಕಪ್ಪ ಮಾಸ್ತರ್ ಕುಂಚಡ್ಕ,ಬಾಲಕೃಷ್ಣ ಗೌಡ ಕುಂಚಡ್ಕ, ಸಮಿತಿ ಕಾರ್ಯದರ್ಶಿ ನವೀನ್ ಕುಮಾರ್ ಕುಂಚಡ್ಕ, ಖಜಾಂಜಿ ಲೋಲಜಾಕ್ಷ ಹಾಗೂ ಕುಟುಂಬದ ಹಿರಿಯ ಕಿರಿಯ ಸದಸ್ಯರು ಆಗಮಿಸಿದ ಭಕ್ತಾದಿಗಳನ್ನು ಸ್ವಾಗತಿಸಿದರು. ಸದ್ರಿ ದಿನಗಳಲ್ಲಿ ಆಗಮಿಸಿದ ಎಲ್ಲರಿಗೂ ನಿರಂತರವಾಗಿ ಅನ್ನ ಪ್ರಸಾದ ವಿತರಣೆ ಮಾಡಲಾಯಿತು.