ಸುಳ್ಯದ ಯುವ ಲೇಖಕ ಅನಿಂದಿತ್ ಗೌಡ ಕೊಚ್ಚಿ ಬಾರಿಕೆ ಅವರಿಗೆ ದೆಹಲಿಯ ಪ್ರತಿಷ್ಠಿತ ಐ ಐ ಪಿ ಫೌಂಡೇಷನ್ ಉನ್ನತ ಶಿಕ್ಷಣ ಸ್ಕಾಲರ್‌ಶಿಪ್ ನೀಡಿ ಗೌರವಿಸಿದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ‘ರಿಕಾಲಿಂಗ್ ಅಮರ ಸುಳ್ಯ’ ಪುಸ್ತಕಕ್ಕಾಗಿ ಈ ಸ್ಕಾಲರ್‌ಶಿಪ್ ನೀಡಲಾಗಿದೆ.
ಈ ಪುಸ್ತಕದಲ್ಲಿ, ಅನಿಂದಿತ್ ತಮ್ಮ ಹುಟ್ಟೂರು ಸುಳ್ಯದ ಚರಿತ್ರೆಯನ್ನು ಆಂಗ್ಲ ಭಾಷೆಯಲ್ಲಿ ಸಾಹಿತ್ಯಿಕವಾಗಿ ಆಕರ್ಷಕವಾಗಿ ಮೂಡಿಸಿದ್ದಾರೆ. ಒಂದು ಊರಿನ ಚರಿತ್ರೆಯನ್ನು ಆಂಗ್ಲ ಭಾಷಾ ಓದುಗರಿಗೆ ತೆರೆದಿಟ್ಟ ರೀತಿ ಹಾಗೂ ಚರಿತ್ರೆಯ ಬಗ್ಗೆ ಹೊಸ ದೃಷ್ಟಿಕೋನ ನೀಡಿದಕ್ಕೆ ವಿಶೇಷವಾಗಿ ಗುರುತಿಸಲಾಗಿದೆ.
ಇದರಿಂದ ಅನಿಂದಿತ್ ಅವರಿಗೆ ಚರಿತ್ರೆ, ಸಂಸ್ಕೃತಿ ಹಾಗೂ ಕಥೆ ಪ್ರಸ್ತುತಿಯ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲು ಅವಕಾಶ ಸಿಕ್ಕಿದೆ.