ಬೆಳ್ಳಾರೆ : ಕೊಡಿಯಾಲ – ಕುಂಟುಪುಣಿ ಕಿತ್ತುಹೋದ ರಸ್ತೆ

0

ಕೊಡಿಯಾಲ ಗ್ರಾಮದ ದರ್ಖಾಸ್ತು ಎಂಬಲ್ಲಿಂದ ಕುಂಟುಪುಣಿಗುತ್ತು ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟು ಗ್ರಾಮಸ್ಥರು ವಿಪರೀತ ತೊಂದರೆ ಅನುಭವಿಸುವಂತಾಗಿದೆ. 10 ವರ್ಷದ ಹಿಂದೆ ಹಾಕಿದ ಸ್ವಲ್ಪ ದೂರದ ವರೆಗಿನ ಡಾಂಬರು ಸಂಪೂರ್ಣ ಕಿತ್ತು ಹೋಗಿದ್ದು ಉಳಿದ ಹಾದಿ ಕಚ್ಚಾ ರಸ್ತೆಯಾಗಿದೆ. ಈ ಬಗ್ಗೆ ಜನ ಪ್ರತಿನಿಧಿಗಳ ಗಮನಕ್ಕೆ ಪ್ರತಿವರ್ಷ ತoದರೂ ಏನೂ ಪರಿಹಾರ ಸಿಕ್ಕಿಲ್ಲ. ಈ ಸಮಸ್ಯೆಯನ್ನು ಪ್ರಧಾನ ಮಂತ್ರಿಯವರ ವೆಬ್ಸೈಟ್ನಲ್ಲಿ ದಾಖಲಿಸಿದ್ದು ತಕ್ಷಣ ಸಮಸ್ಯೆ ಪರಿಹರಿಸಲು ರಾಜ್ಯ ಸರಕಾರಕ್ಕೆ ಸೂಚನೆ ಕೊಟ್ಟಿದ್ದರೂ ಇಲ್ಲಿನ ಲೋಕೋಪಯೋಗಿ ವಿಭಾಗದ ಅಧಿಕಾರಿಗಳು ಸರಕಾರದಿಂದ ಕಾಂಕ್ರೀಟ್ ಹಾಕಲು ಬೇಕಾದ ಅನುದಾನ ಬರುತ್ತಿಲ್ಲವೆಂದು ಮುಂದೆ ಹಾಕುತ್ತಿದ್ದಾರೆ. ಮಳೆಗಾಲದಲ್ಲಿ ಈ ರಸ್ತೆಯ ಕೆಲವು ಭಾಗಗಳಲ್ಲಿ ವಾಹನ ಸಂಚಾರ ಅಸಾಧ್ಯವಾಗಿರುವುದರಿಂದ ತುರ್ತು ಚಿಕಿತ್ಸೆ ಬೇಕಾದಲ್ಲಿ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಸಂಬಂದಪಟ್ಟವರು ಗಮನಹರಿಸಿ ಸ್ಥಳೀಯರ ಬಹಳ ವರ್ಷದ ಬೇಡಿಕೆಯನ್ನು ಈಡೇರಿಸಬೇಕೆಂದು ಸಾರ್ವಜನಿಕರು ವಿನಂತಿಸಿದ್ದಾರೆ.