ನಾಪತ್ತೆಯಾಗಿದ್ದ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಕಾಣಿಯೂರಿನ ಬೇಂಗಡ್ಕ ಅಭಿಷೇಕ್ ಎಂಬಾತ ಬೆಂಗಳೂರಿನಲ್ಲಿ ಡಿ.7 ರಂದು ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಇವರು ಕಾಣೆಯಾಗಿರುವ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಡಿ.04 ರಂದು ದೂರು ದಾಖಲಾಗಿತ್ತು.
ಬೆಂಗಳೂರಿನಲ್ಲಿ ಪತ್ತೆಯಾದ ಅಭಿಷೇಕ್ ನನ್ನು ಬೆಳ್ಳಾರೆ ಪೊಲೀಸರು ಮನೆಯವರೊಂದಿಗೆ ಬೆಳ್ಳಾರೆಗೆ ಕರೆತಂದಿರುವುದಾಗಿ ತಿಳಿದುಬಂದಿದೆ.