ಸುಳ್ಯದಿಂದ ಆಲೆಟ್ಟಿ ಕಡೆಗೆ ಸಂಚರಿಸುವ ರಸ್ತೆಯ ನಾಗಪಟ್ಟಣ ವಿಶ್ರಾಂತಿ ಗೃಹದ ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಟೋ ರಿಕ್ಷಾವೊಂದು ಚರಂಡಿಗಿಳಿದ ಘಟನೆ ಇಂದು ಬೆಳಗ್ಗೆ ವರದಿಯಾಗಿದೆ.
ನಾರ್ಕೋಡು ಕಡೆಯಿಂದ ಸುಳ್ಯಕ್ಕೆ ಬರುತ್ತಿದ್ದ ರಿಕ್ಷಾ ಮಿತ್ತಡ್ಕದಿಂದ ಮುಂದಕ್ಕೆ ಗೆಸ್ಟ್ ಹೌಸ್ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಇಳಿಯಿತು. ಅಟೋ ರಿಕ್ಷಾದಲ್ಲಿ ಚಾಲಕ ಸೇರಿದಂತೆ ಪ್ರಯಾಣಿಕರಿದ್ದು ಅದೃಷ್ಡವಶಾತ್ ಎಲ್ಲರೂ ಪ್ರಾಣಾಪಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.