ವಿದ್ಯಾರ್ಥಿಗಳಿಂದ ವಿವಿಧ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ
ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಪಾಪ್ಯುಲರ್ ಎಜುಕೇಶನ್ ಸೊಸೈಟಿ ರಿ.ಇದರ ವತಿಯಿಂದ ಡಿ.8 ರಂದು ಪ್ರತಿಭಾ ಪುರಸ್ಕಾರ ಸಮಾರಂಭ ಸಂಸ್ಥೆಯ ಸಭಾಂಗಣ ವೇದಿಕೆಯಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಪ್ಯುಲರ್ ಎಜುಕೇಶನಲ್ ಸೊಸೈಟಿ ಇದರ ಅಧ್ಯಕ್ಷ ಪಿ ಬಿ ದಿವಾಕರ ರೈ ವಹಿಸಿದ್ದರು. ನಿವೃತ್ತ ಕೈಗಾರಿಕಾ ವಿಸ್ತರಣಾಧಿಕಾರಿ ವೀರಪ್ಪಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸರ್ಕಾರಿ ಪಿಯು ಕಾಲೇಜ್ ನ ನಿವೃತ್ತ ಉಪನ್ಯಾಸಕರಾದ ಶ್ರೀಮತಿ ಲೀಲಾ ದಾಮೋದರ ದಿಕ್ಸೂಚಿ ಭಾಷಣವನ್ನು ಮಾಡಿದರು. ಶಾಲಾ ವರದಿ ವಾಚನವನ್ನು ಪ್ರಾಂಶುಪಾಲರಾದ ರಮೇಶ್ ಎಸ್ ವಾಚಿಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ಆಡಳಿತ ಸಮಿತಿ ಸದಸ್ಯರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಶಾಲಾ ಸಂಚಾಲಕ ಕೆ.ಆರ್. ಗಂಗಾಧರ ಸ್ವಾಗತಿಸಿ, ಶಿಕ್ಷಕರಾದ ಕಿಶೋರ ಕುಮಾರ್ ಮತ್ತು ಶ್ರೀಮತಿ ಶ್ರೀಲತಾ ಕಾರ್ಯಕ್ರಮ ನಿರೂಪಿಸಿ, ಮುಖ್ಯ ಶಿಕ್ಷಕರಾದ ಸೀತಾರಾಮ ಎಂ. ಕೆ. ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ನಿವೃತ್ತ ಶಿಕ್ಷಕ ಶಿವಣ್ಣ ಇಂದುವಾಡಿ ರವರಿಂದ ಜಾನಪದ ಹಾಗೂ ತತ್ವ ಪದಗಳ ಗಾಯನ ನಡೆಯಿತು.
ಬಳಿಕ ವಿದ್ಯಾರ್ಥಿಗಳಿಂದ ವಿವಿಧ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕರ್ನಾಟಕ ಸುವರ್ಣ ಸಂಭ್ರಮದ ಪ್ರಯುಕ್ತ ಜಾನಪದ ಹಾಡು, ರಾಮಾಯಣದ ಕಥಾ ಭಾಗದ ಕುರಿತ ನೃತ್ಯ, ಜಾತ್ರಾ ವಿಶೇಷತೆಯನ್ನು ತೋರಿಸುವ ನೃತ್ಯ, ಆದಿವಾಸಿಗಳ ಬುಡಕಟ್ಟು ಜನರ ಜಾನಪದ ಕಾರ್ಯಕ್ರಮ, ಯಕ್ಷಗಾನ ಕಾರ್ಯಕ್ರಮ ಜನರ ಕಣ್ಮನ ಸೆಳೆಯಿತು.
ಸಮಾರಂಭದಲ್ಲಿ ಪೋಷಕರು ಹಾಗೂ ಸ್ಥಳೀಯರು ಭಾಗವಹಿಸಿದ್ದರು.