ಗ್ರಾಮ ಮಟ್ಟದಲ್ಲಿ ನಡೆದ ವಿಶ್ವ ವಿಕಲಚೇತನರ ವಿಶೇಷ ಕಾರ್ಯಕ್ರಮ- ಯಶಸ್ಸಿನ ರೂವಾರಿಗಳಾದ ಗುತ್ತಿಗಾರು ಮತ್ತು ನಾಲ್ಕೂರು ವಿಶೇಷ ಚೇತನರು

0

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ
ಸಾರ್ವಜನಿಕ ಶಿಕ್ಷಣ ಇಲಾಖೆ
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಛೇರಿ ಸುಳ್ಯ
ಗುತ್ತಿಗಾರು ಗ್ರಾಮ ಪಂಚಾಯತ್
ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗಾರು
ಅರಿವು ಕೇಂದ್ರ ಗ್ರಾ.ಪಂಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ
ಪ್ರಾಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರು
ಯುವಜನ ಸಂಯುಕ್ತ ಮಂಡಳಿ(ರಿ) ಸುಳ್ಯ
ಲಯನ್ಸ್ ಕ್ಲಬ್ ಗುತ್ತಿಗಾರು
ರೋಟರಿ ಕ್ಲಬ್ ಸುಬ್ರಹ್ಮಣ್ಯ
ಇನ್ನರ್ ವೀಲ್ ಸುಬ್ರಹ್ಮಣ್ಯ ಹಾಗೂ ಗ್ರಾಮ ಪಂಚಾಯತ್ ಮಟ್ಟದ ಅಂಗನವಾಡಿ ಕೇಂದ್ರಗಳು ಇವುಗಳ ಸಂಯುಕ್ತ ಆಶ್ರಯದಲ್ಲಿ
ದ. 08ರಂದ “ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಸ್ಪರ್ಧಾ ಕಾರ್ಯಕ್ರಮ ಮತ್ತು ಅಭಿನಂದನಾ ಕಾರ್ಯಕ್ರಮ ” ಗ್ರಾಮ ಪಂಚಾಯತ್ ಪ.ವರ್ಗದ ಸಭಾಭವನ ಗುತ್ತಿಗಾರು ಇಲ್ಲಿ ನಡೆಯಿತು.

ಬೆಳಗ್ಗೆ ಗ್ರಾಮ ಪಂಚಾಯತ್ ಅಧ್ಯಕ್ಷರಿಂದ ಕಾರ್ಯಕ್ರಮ ಉದ್ಘಾಟನೆಗೊಂಡಿತು. ಪಂಚಾಯತ್ ಹಿರಿಯ ಸದಸ್ಯರು ವೆಂಕಟ್ ವಳಲಂಬೆ, ತಾಲ್ಲೂಕು ಕಾರ್ಯಕ್ರಮ ಸಂಯೋಜಕಿ ಶ್ರೀಮತಿ ಶ್ವೇತ, ಪಿ.ಡಿಒ ಧನಪತಿ, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪ್ರವೀಣ್ ಕುಮಾರ್ ಶುಭ ಹಾರೈಸಿದರು. ಅಮರ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ದಿವ್ಯ ಸುಜನ್ ಗುಡ್ಡೆಮನೆ,ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಭಾರತಿ,ಸದಸ್ಯರಾದ ಲತಾ ಆಜಡ್ಕ,ವಿನಯ್,ಜಗದೀಶ್ ಬಾಕಿಲ,ಪ್ರಮೀಳಾ ಭಾಸ್ಕರ,ಲೀಲಾವತಿ,ಶಾರದ,ಮಂಜುಳ ಮುತ್ಲಾಜೆ,ಅನಿತಾ ಮೆಟ್ಟಿನಡ್ಕ, ರೇವತಿ ಆಚಳ್ಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಂತರ ವಿಶೇಷಚೇತನರಿಗೆ ಕ್ರೀಡಾ ಸ್ಪರ್ಧೆ ನಡೆಯಿತು. ಮಹಿಳೆಯರ ವಿಭಾಗ,ಪುರುಷರ ವಿಭಾಗ ಹಾಗೂ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ನಡೆಸಲಾಯಿತು.

ನಂತರ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ವಿಶೇಷ ಅಹ್ವಾನಿತರಾಗಿ ಆಗಮಿಸಿದ ಮಾಜಿ ಡಿಡಿಆರ್ ಸಿ ನೋಡೆಲ್ ಅಧಿಕಾರಿ ಪಿ ವಿ ಸುಬ್ರಮಣಿ ಉತ್ತಮ ಮಾಹಿತಿ ನೀಡಿ ಗ್ರಾಮ ಮಟ್ಟದಲ್ಲಿ ಪ್ರಪ್ರಥಮವಾಗಿ ಈ ಒಂದು ಕಾರ್ಯಕ್ರಮ ನಡೆದಿರುವುದು ಶ್ಲಾಘನೀಯ ಎಂದರು ದಿವ್ಯಾಂಗರ ಬಗ್ಗೆ ಅನುಕಂಪ ಬೇಡ ಅವರಿಗೆ ಅವಕಾಶಗಳನ್ನು ನೀಡಿ ಎಂದು ಪ್ರೋತ್ಸಾಹಿಸಿದರು.
ಕಾರ್ಯಕ್ರಮ ಕ್ಕೆ ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ರಾದ ಶ್ರೀ ಜಯರಾಮ ಕೆ.ಇ ಮಾತನಾಡಿ ಒಕ್ಕೂಟದ ಲ್ಲಿ 3 ವಿಶೇಷಚೇತನರ ಸ್ವಸಹಾಯ ಸಂಘಗಳು ರಚನೆಯಾಗಿದೆ ಅವರಿಗೆ ಉತ್ತಮ ಸೌಲಭ್ಯ ಒದಗುವಂತಾಗಬೇಕು ಎಂಬುದಾಗಿ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಅಗಮಿಸಿದ್ದ ತಾಲೂಕು ವೈದ್ಯಾಧಿಕಾರಿ ನಂದಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, ಸಿಡಿಪಿಒ ಶ್ರೀಮತಿ ಶೈಲಜಾ ಅಭಿನಂದನಾ ಮಾತುಗಳನ್ನಾಡಿದರು.

ನಂತರ ಗುತ್ತಿಗಾರು ಹಾಗೂ ನಾಲ್ಕೂರು ಗ್ರಾಮಗಳಲ್ಲಿ ಅಪ್ರತಿಮ ಸಾಧನೆಗೈದ ವಿಶೇಷ ಚೇತನ ಸಾಧಕರನ್ನು ಸನ್ಮಾನಿಸಲಾಯಿತು.
ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರತಿಯೊಬ್ಬರಿಗೂ ಪ್ರೋತ್ಸಾಹಕ ಬಹುಮಾನವನ್ನು ನೀಡಲಾಯಿತು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮಿತ್ರಾ ಮೂಕಮಲೆ,ಉಪಾಧ್ಯಕ್ಷೆ ಭಾರತಿ ಸಾಲ್ತಾಡಿ,ಸರ್ವ ಸದಸ್ಯರು, ಪಿಡಿಒ ಧನಪತಿ, ಅಮರ ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ದಿವ್ಯ ಸುಜನ್ ಗುಡ್ಡೆಮನೆ,ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಶ್ರೀಮತಿ ಕಾವೇರಿ ಭರತ್,ಎಂ.ಅರ್.ಡಬ್ಲ್ಯೂ ಶ್ರೀ ಚಂದ್ರಶೇಖರ್, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪ್ರವೀಣ್ ಕುಮಾರ್ ಜಯನಗರ, ಲಯನ್ಸ್ ಕ್ಲಬ್ ಗುತ್ತಿಗಾರು ಅಧ್ಯಕ್ಷ ರು ಜಯರಾಮ್ ಕಡ್ಲಾರು,ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ಮಾಜಿ ಅಧ್ಯಕ್ಷ ರು ಶ್ರೀ ಮಾಯಿಲಪ್ಪ ಸಂಕೇಶ , ಇನ್ನರ್ ವೀಲ್ ನ ಪೂರ್ವಾಧ್ಯಕ್ಷೆ ಸರೋಜಿನಿ ಮಾಯಿಲಪ್ಪ,
ಮಾಜಿ ಮಂಡಲ ಪ್ರಧಾನರಾದ ಶ್ರೀ ಮುಳಿಯ ತಿಮ್ಮಪ್ಪಯ್ಯ ಉಪಸ್ಥಿತರಿದ್ದರು.

ಅಮರ ಸಂಜೀವಿನಿ ಒಕ್ಕೂಟದ ಮಾಜಿ ಅಧ್ಯಕ್ಷರು ಶ್ರೀಮತಿ ರವಿಕಲಾ ಚೆಮ್ನೂರು ಪ್ರಾರ್ಥಿಸಿ ದರು,ಪಂಚಾಯತ್ ಉಪಾಧ್ಯಕ್ಷೆ ಭಾರತಿ ಸ್ವಾಗತಿಸಿದರು. ಒಕ್ಕೂಟದ ಅದ್ಯಕ್ಷೆ ದಿವ್ಯ ಸುಜನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಬಳ್ಳಕ್ಕ ಕೇಂದ್ರದ ಅಂಗನವಾಡಿ ಕಾರ್ಯಕರ್ತೆ ಲತಾ ಅಂಬೆಕಲ್ಲು ವಂದಿಸಿದರು, ಗ್ರಂಥಾಲಯ ಮೇಲ್ವಿಚಾರಕಿ ಅಭಿಲಾಷ ಶಿವಪ್ರಕಾಶ್ ಮೋಟ್ನೂರು ಕಾರ್ಯಕ್ರಮ ನಿರೂಪಿಸಿದರು. Mbk ಮಿತ್ರಕುಮಾರಿ ಚಿಕ್ಮುಳಿ,Lcrp ದಿವ್ಯ ಹರೀಶ್ ಹಾಗೂ ಶಾರದ, ಪಶುಸಖಿ ಚೈತನ್ಯ, ಒಕ್ಕೂಟದ ಪದಾಧಿಕಾರಿಗಳು ಶೋಬಿತಾ,ನಾಗವೇಣಿ,ಜಯಶ್ರೀ, ಜಯಲಕ್ಷ್ಮಿ ಬಳ್ಳಕ್ಕ ಮೋಹನಾಂಗಿ ಉದೇರಿ ಗುತ್ತಿಗಾರು ಗ್ರಾಮ ಪಂಚಾಯತ್ ನ 9 ಅಂಗನವಾಡಿ ಕಾರ್ಯಕರ್ತೆಯರು ಸಹಕರಿಸಿದರು. ಕಾರ್ಯಕ್ರಮದಲ್ಲಿ NRLM ನ TPM ಶ್ವೇತಾ,ಅಂಗನವಾಡಿ ವಲಯ ಮೇಲ್ವಿಚಾರಕಿ ವಿಜಯ್.ಜೆ.ಡಿ. ಶಿಕ್ಷಣ ಇಲಾಖೆ ಯ ನಳಿನಿ, ಇನ್ನರ್ ವೀಲ್ ನ ಚಂದ್ರಾವತಿ ಚಿದ್ಗಲ್ ,ಯುವಜನ ಸಂಯುಕ್ತ ಮಂಡಳಿ ನಿರ್ದೇಶಕ ದಿನೇಶ್ ಹಾಲೆಮಜಲು ಗ್ರಾಮ ಪಂಚಾಯತ್ ಸಿಬ್ಬಂದಿ ಗಳು. ಆಶಾ ಕಾರ್ಯಕರ್ತೆಯರು, ಘನತ್ಯಾಜ್ಯ ಘಟಕದ ಸಿಬ್ಬಂದಿಗಳು, ಗುತ್ತಿಗಾರು ನಾಲ್ಕೂರಿನ ವಿಶೇಷಚೇತನರು ಮತ್ತು ಪೋಷಕರು, ಸಾರ್ವಜನಿಕರು ಉಪ ಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಂಡಿತು.
ವಿಪತ್ತು ನಿರ್ವಹಣಾ ತಂಡ ನಾಲ್ಕೂರು ಭೊಜನ ವ್ಯವಸ್ಥೆಗೆ ಸಹಕರಿಸಿದರು.