ಆಲೆಟ್ಟಿಯಲ್ಲಿ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ಇದರ ನೂತನ ಕಾರ್ಯಾಲಯದ ಉದ್ಘಾಟನೆ

0

ಆಲೆಟ್ಟಿ ಪಂಚಾಯತ್ ವ್ಯಾಪ್ತಿಯ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ಇದರ ನೂತನ ಕಾರ್ಯಾಲಯದ ಉದ್ಘಾಟನೆಯು ಇಂದು ಬೆಳಗ್ಗೆ ಆಲೆಟ್ಟಿಯಲ್ಲಿ ನಡೆಯಿತು.
ಪ್ರಾತ:ಕಾಲದಲ್ಲಿ ದೇವಸ್ಥಾನದ ಅರ್ಚಕ ಹರ್ಷಿತ್ ಬನ್ನಿಂತಾಯ ರವರು ಗಣಪತಿ ಹವನ ನೆರವೇರಿಸಿದರು.
ಆಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾಕುಮಾರಿ ಆಲೆಟ್ಟಿ ಕಾರ್ಯಾಲಯವನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ಗುಂಡ್ಯ ಮಾಡಾರಮನೆ ಉಳ್ಳಾಕುಲು ಸಪರಿವಾರ ದೈವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ಪ್ರಭು ಸುಳ್ಯ ರವರು ದೀಪ ಪ್ರಜ್ವಲಿಸಿ ಶುಭ ಹಾರೈಸಿ ಕ್ಲಬ್ಬಿನ ವತಿಯಿಂದ ಹಮ್ಮಿಕೊಳ್ಳುವ ಸಮಾಜ ಸೇವೆಯ ಸದುದ್ದೇಶಕ್ಕಾಗಿ ನಗದು ದೇಣಿಗೆಯನ್ನು ಅಧ್ಯಕ್ಷರಿಗೆ ಹಸ್ತಾಂತರಿಸಿದರು.

ಜನನಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ತೀರ್ಥಕುಮಾರ್ ವಾಲ್ತಾಜೆ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಕಮಲಾ ನಾಗಪಟ್ಟಣ, ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಸುಧಾಕರ ಆಲೆಟ್ಟಿ, ಆಲೆಟ್ಟಿ ವಿ.ಹೆಚ್.ಪಿ ಪ್ರಖಂಡದ ಅಧ್ಯಕ್ಷ ನಾರಾಯಣ ರೈ ಆಲೆಟ್ಟಿ,
ಕ್ಲಬ್ ಗೌರವಾಧ್ಯಕ್ಷ ನಿತಿನ್ ಗುಂಡ್ಯ ಉಪಸ್ಥಿತರಿದ್ದರು.


ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಕ್ಲಬ್ ಗೌರವಾಧ್ಯಕ್ಷ ಲತೀಶ್ ಗುಂಡ್ಯ ವಂದಿಸಿದರು.
ಆಲೆಟ್ಟಿ ಯುವಕ ಮಂಡಲದ ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯ ಗ್ರಾಮಸ್ಥರು ಭಾಗವಹಿಸಿದರು. ಜನನಿ ಕ್ಲಬ್ ಸದಸ್ಯರು ಸಹಕರಿಸಿದರು.