ಆಲೆಟ್ಟಿ ಪ್ರೀಮಿಯರ್ ಲೀಗ್ ಹೊನಲು ಬೆಳಕಿನ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ಉದ್ಘಾಟನೆ

0

ಕೋಲ್ಚಾರಿನಲ್ಲಿ ನಮ್ಮೂರ ಕ್ರಿಕೆಟ್ ಹಬ್ಬ- ಹಿರಿಯ ಕ್ರಿಕೆಟ್ ಆಟಗಾರರಿಗೆ ಸನ್ಮಾನ, ಹಿರಿಯರ ಪ್ರದರ್ಶನ ಪಂದ್ಯ

ಆಲೆಟ್ಟಿ ಕ್ರಿಕೆಟ್ ಬೋರ್ಡ್ ಮತ್ತು ಹಳೆ ವಿದ್ಯಾರ್ಥಿಗಳ ಸಂಘ ಕೋಲ್ಚಾರು ಇದರ ಸಹಯೋಗದಲ್ಲಿ ಆಲೆಟ್ಟಿ ಗ್ರಾಮದ 8 ತಂಡಗಳ ಲೀಗ್ ಮಾದರಿಯ ಹೊನಲು ಬೆಳಕಿನ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ಉದ್ಘಾಟನೆಯು ಡಿ.9 ರಂದು ಕೋಲ್ಚಾರು ಸರಕಾರಿ ಶಾಲಾ ಮೈದಾನದಲ್ಲಿ ನಡೆಯಿತು.


ಎರಡು ದಿನಗಳ ಕಾಲ ನಡೆಯಲಿರುವ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟದ ಟ್ರೋಫಿಯನ್ನು
ಮಾಜಿ ಸಚಿವ ಎಸ್.ಅಂಗಾರ ರವರು ಅನಾವರಣಗೊಳಿಸಿದರು.
ಹಿರಿಯ ಕ್ರೀಡಾಪಟು ಗಿರಿಜಾ ಶಂಕರ ತುದಿಯಡ್ಕ ಪಂದ್ಯಾಟವನ್ನು ಉದ್ಘಾಟಿಸಿದರು.
ಎ.ಪಿ.ಎಲ್ ಸಮಿತಿ ಅಧ್ಯಕ್ಷ ಹರೀಶ್ ಕೊಯಿಂಗಾಜೆ ಅಧ್ಯಕ್ಷತೆ ವಹಿಸಿದ್ದರು. ಎ.ಓ.ಎಲ್.ಇ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ಪಂದ್ಯಾಟದ ಮೈದಾನವನ್ನು ಅನಾವರಣಗೊಳಿಸಿದರು.


ಮುಖ್ಯ ಅತಿಥಿಗಳಾಗಿ
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಕೊಯಿಂಗಾಜೆ, ತಾ.ಪಂ.ಮಾಜಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕರುಣಾಕರ ಹಾಸ್ಪಾರೆ, ಯುವ ಉದ್ಯಮಿ ವಿಕ್ರಂ ಅಡ್ಪಂಗಾಯ, ಆಲೆಟ್ಟಿ ಪಂಚಾಯತ್ ಮಾಜಿ ಅಧ್ಯಕ್ಷ ಪುರುಷೋತ್ತಮ ಕೋಲ್ಚಾರು, ಆಲೆಟ್ಟಿ ಪಂಚಾಯತ್ ಉಪಾಧ್ಯಕ್ಷೆ ಕಮಲಾ ನಾಗಪಟ್ಟಣ, ಪಂ.ಸದಸ್ಯ ಧರ್ಮಪಾಲ ಕೊಯಿಂಗಾಜೆ, ಸತ್ಯ ಕುಮಾರ್ ಆಡಿಂಜ, ಗೀತಾ ಕೋಲ್ಚಾರು, ಕುಸುಮಾವತಿ ಬಿಲ್ಲರಮಜಲು, ನಾಗಪಟ್ಟಣ ಸದಾಶಿವ ದೇವಸ್ಥಾನದ ವ್ಯ.ಸ.ಅಧ್ಯಕ್ಷ ದಿನೇಶ್ ಕೋಲ್ಚಾರು, ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಗುರುದತ್ ನಾಯಕ್, ಯುವ ಉದ್ಯಮಿ ಶಾಫಿ ಕುತ್ತಮೊಟ್ಟೆ, ಕೋಲ್ಚಾರು ಅರಣ್ಯ ರಕ್ಷಕ ಪತ್ರಪ್ಪ ಚವಡಪ್ಪನವರ್, ಶಾಲಾ ಮುಖ್ಯ ಶಿಕ್ಷಕ ಚಿನ್ನಸ್ವಾಮಿ ಶೆಟ್ಟಿ,ನಿವೃತ್ತ ಶಿಕ್ಷಕಿ ನಾಗವೇಣಿ ಕೊಯಿಂಗಾಜೆ, ಸರಕಾರಿ ಆಸ್ಪತ್ರೆ ಆಪ್ತ ಸಮಾಲೋಚಕ ರಾಜೇಶ್ ಕುಡೆಕಲ್ಲು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹಿರಿಯ ಕ್ರಿಕೆಟ್ ಆಟಗಾರರಾದ ಪುರುಷೋತ್ತಮ ಕೋಲ್ಚಾರು, ಗಿರಿಜಾ ಶಂಕರ ತುದಿಯಡ್ಕ, ತೇಜಕುಮಾರ್ ಕುಡೆಕಲ್ಲು, ಯತಿರಾಜ್ ಭೂತಕಲ್ಲು ರವರನ್ನು ಎ.ಪಿ.ಎಲ್ ಸಮಿತಿ ವತಿಯಿಂದ ಮಾಜಿ ಸಚಿವ ಎಸ್.ಅಂಗಾರ ರವರು ಸನ್ಮಾನಿಸಿದರು.
ಪ್ರದೀಪ್ ಕೊಲ್ಲರಮೂಲೆ ಸ್ವಾಗತಿಸಿದರು. ವಿಖ್ಯಾತ್ ಬಾರ್ಪಣೆ ಕಾರ್ಯಕ್ರಮ ನಿರೂಪಿಸಿದರು.


ವಿಶೇಷವಾಗಿ 50 ವರ್ಷ ಮೇಲ್ಪಟ್ಟ ಹಿರಿಯರ ಪ್ರದರ್ಶನ ಪಂದ್ಯ ನಡೆಯಿತು. ತಡರಾತ್ರಿ ತನಕ ಪಂದ್ಯಾಟವು ನಡೆಯಿತು.
ಮಳೆಯ ಕಾರಣದಿಂದಾಗಿ ಬಾಕಿ ಉಳಿದ ಮ್ಯಾಚ್ ಗಳನ್ನು ಮರುದಿನ ನಡೆಸುವುದಾಗಿ ಕಮಿಟಿ ಪದಾಧಿಕಾರಿಗಳು ಘೋಷಿಸಿದರು. ಎ.ಪಿ.ಎಲ್ ಕಮಿಟಿ ಸದಸ್ಯರು ಸಹಕರಿಸಿದರು.