ಸುಳ್ಯ ಚೆನ್ನಕೇಶವ ದೇವರ ಜಾತ್ರೆಯಲ್ಲಿ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡುವಂತೆ ಹಿಂದೂ ಪರ ಸಂಘಟನೆಯಿಂದ ಮನವಿ

0

ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವದ ಸಮಯದಲ್ಲಿ ಸಂತೆ ವ್ಯಾಪಾರ ಮಾಡಲು ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡಬೇಕೆಂದು ಸುಳ್ಯ ನಗರವಿಶ್ವ ಹಿಂದೂ ಪರಿಷತ್ ಬಜರಂಗದಳ ಮತ್ತು ದ.ಕ ಜಿಲ್ಲೆ ಸನಾತನ ಹಿಂದೂ ವ್ಯಾಪಾರಸ್ಥರ ಸಂಘದ ಕಾರ್ಯಕರ್ತರು ಚೆನ್ನಕೇಶವ ದೇವಸ್ಥಾನಕ್ಕೆ ಡಿ.11 ರಂದು ಮನವಿ ಸಲ್ಲಿಸಿದರು.

ಜಾತ್ರೋತ್ಸವದ ಮೈದಾನವನ್ನು ಅನ್ಯ ಮತೀಯರಿಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದು. ಹಿಂದೂ ಬಾಂಧವರಿಗೆ ಮಾತ್ರ ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡರು.


ಈ ಸಂದರ್ಭದಲ್ಲಿ ವಿ.ಚ್.ಪಿ ಸುಳ್ಯ ನಗರ ಅಧ್ಯಕ್ಷ ಉಪೇಂದ್ರ ಕಾಯರ್ತೋಡಿ,ವಿ.ಚ್.ಪಿ ಸುಳ್ಯ ಪ್ರಖಂಡ ಕಾರ್ಯದರ್ಶಿ ನವೀನ್ ಎಲಿಮಲೆ, ಸನಾತನ ಹಿಂದೂ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜಯರಾಮ ಶೆಟ್ಟಿಗಾರು, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಬಜರಂಗದಳ ಜಿಲ್ಲಾ ಸಹ ಸಂಚಾಲಕ್ ಲತೀಶ್ ಗುಂಡ್ಯ, ಬಜರಂಗದಳ ಸುಳ್ಯ ನಗರ ಸಂಚಾಲಕ ವರ್ಷಿತ್ ಚೊಕ್ಕಾಡಿ, ಸುಭೋದ್ ಶೆಟ್ಟಿ ಮೇನಾಲ,ಕರುಣಾಕರ ಹಾಸ್ಪಾರೆ, ಚಿದಾನಂದ ವಿದ್ಯಾನಗರ, ವಿನಯ್ ಕುಮಾರ್ ಕಂದಡ್ಕ, ದೇವಿಪ್ರಸಾದ್ ಅತ್ಯಾಡಿ, ಮನೋಜ್ ಪೆರಾಜೆ,ಸನತ್ ಚೊಕ್ಕಾಡಿ, ರೂಪೇಶ್ ಪೂಜಾರಿಮನೆ,ರಾಜೇಶ್ ಕಲ್ಲುಮುಟ್ಲು,ಜಸ್ಮಿತ್, ಪ್ರಕಾಶ್ ಯಾದವ್,ಪ್ರದೀಪ್ ಮಡಿಕೇರಿ,ಅರುಣ್ ರಾವ್,ಅಭಿಜಿತ್, ಮಿಥುನ್,ಅನೀಶ್, ಅನ್ವಿತ್ ಹಾಗೂ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.