ಸಹೋದರಿಯತೆ ಮತ್ತು ಭಾತೃತ್ವವನ್ನು ಸಾರುವ ಹಬ್ಬವಾಗಿದೆ ಈದ್, ಬಡವ ಮತ್ತು ಶ್ರೀಮಂತನಿಗೆ ಹಸಿವು ಎಂದರೆ ಏನು ಎಂಬ ಅನುಭವವನ್ನು ನೀಡುವ ಆಚರಣೆಯಾಗಿದೆ ರಂಝಾನ್: ಮಹಮ್ಮದ್ ಸಖಾಫಿ ಅಲ್ ಹಿಕಮಿ
ಕೊಯನಾಡು:- ಸುನ್ನಿ ಮುಸ್ಲಿಂ ಜುಮಾ ಮಸೀದಿಯಲ್ಲಿ ಸಂಭ್ರಮ ಸಡಗರದ ಆಚರಣೆ ನಡೆಯಿತು, ಈದ್ ಪ್ರಯುಕ್ತ ಮಸೀದಿಯಲ್ಲಿ ಈದ್ ಸಂದೇಶ ಈದ್ ನಮಾಜ್ ಸಾಮೂಹಿಕ ಪ್ರಾರ್ಥನೆ ನಡೆಯಿತು ಈದ್ ಸಂದೇಶ ಭಾಷಣದಲ್ಲಿ ಮಸೀದಿ ಖತೀಬ್ ಮಹಮ್ಮದ್ ಸಖಾಫಿ ಅಲ್ ಹಿಕಮಿ ಸಹೋದರಿಯತೆ ಮತ್ತು ಭಾತೃತ್ವವನ್ನು ಸಾರುವ ಹಬ್ಬವಾಗಿದೆ ಈದ್, ಬಡವ ಮತ್ತು ಶ್ರೀಮಂತನಿಗೆ ಹಸಿವು ಎಂದರೆ ಏನು ಎಂಬ ಅನುಭವವನ್ನು ನೀಡುವ ಆಚರಣೆಯಾಗಿದೆ ರಂಝಾನ್ ಎಂದು ಹೇಳಿದರು, ಕಾರ್ಯಕ್ರಮದಲ್ಲಿ ಸದರ್ ಮುಅಲ್ಲಿಂ ನೌಶಾದ್ ಫಾಳಿಲಿ, ಜಮಾಅತ್ ಅಧ್ಯಕ್ಷ ಹಾಜಿ ಎಸ್ ಮೊಯಿದಿನ್ ಕುಂಞಿ, NIA ಅಧ್ಯಕ್ಷ ಹನೀಫ್ ಎಸ್ ಪಿ, ಸಹಿತ ಜಮಾಅತ್ ಪದಾಧಿಕಾರಿಗಳು, ಸರ್ವ ಸದಸ್ಯರು, ಊರಿನ ಹಿರಿಯ ಕಿರಿಯ ಜಮಾಅತಿನ ಸರ್ವರು ಭಾಗಿಯಾಗಿದ್ದರು


