ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

0

ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಲ್ಲಿ ಡಿ.12 ರಂದು 2023-24 ನೇ ಸಾಲಿನ ಪ್ರಥಮ ವರ್ಷದ ಬಿ.ಎ., ಎಲ್.ಎಲ್.ಬಿ. ಮತ್ತು ಎಲ್.ಎಲ್.ಬಿ. ಗೆ ಸೇರ್ಪಡೆಗೊಂಡ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಉದಯಕೃಷ್ಣ ಬಿ. ವಹಿಸಿದ್ದರು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಕೀಲೆ ಮತ್ತು ಮಾನಸಿಕ ಆಪ್ತಸಮಾಲೋಚಕಿ ಮೀನಾಕುಮಾರಿ ಕಾನೂನು ವಿದ್ಯಾಭ್ಯಾಸದ ಬಗ್ಗೆ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಟೀನಾ ಹೆಚ್.ಎಸ್. ಮತ್ತು ಕಾಲೇಜಿನ ಬೋಧಕ, ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ವಿದ್ಯಾರ್ಥಿನಿಯರಾದ ಸಂಗೀತಾ ಕೆ.ಜಿ., ಕತಿಕಾ ಬಿ.ಎಚ್. ಮತ್ತು ಅಶ್ವಿನಿ ಕೆ.ಎಸ್. ಪ್ರಾರ್ಥಿಸಿ, ವಿದ್ಯಾರ್ಥಿ ಸುಮಾ ವೈ. ಭಟ್ ಸ್ವಾಗತಿಸಿ, ಎಲ್ರಿನ್ ಬಾಬು ವಂದಿಸಿದರು. ವಿದ್ಯಾರ್ಥಿನಿ ಶತಿ ರಾಧಾಕಷ್ಣನ್ ಕಾರ್ಯಕ್ರಮ ನಿರೂಪಿಸಿದರು.