ಪೂರ್ವಿಕಾ ಆರ್. ಕೆ.ರಿಗೆ ರೋಟರಿ ಸ್ಕೂಲ್‌ನಲ್ಲಿ “ Special Achiever ”   ಸನ್ಮಾನ

0

ಪೂರ್ವಿಕಾ ಆರ್. ಕೆ.ರಿಗೆ ರೋಟರಿ ಸ್ಕೂಲ್‌ನಲ್ಲಿ “ Special Achiever ”   ಸನ್ಮಾನ ಮಾಡಲಾಯಿತು.
ಭಾರತ್ ಸ್ಕೌಟ್ ಮತ್ತು ಗೈಡ್ ನಡೆಸಿದ ದೇಶಭಕ್ತಿ ಗೀತೆಗಳ ಗೀತ ಗಾಯನ ಸ್ಪರ್ಧೆಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಹಾಗೂ ಜಿಲ್ಲಾ ಮಟ್ಟದಲ್ಲಿ ಪೂರ್ವಿಕಾ ಆರ್ ಕೆ. ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಹಾಗೂ ಚೊಕ್ಕಾಡಿ ಫ್ರೌಢ ಶಾಲೆ ಕುಕ್ಕುಜಡ್ಕ ಸುವರ್ಣ ಮಹೋತ್ಸವದ ಅಂಗವಾಗಿ ನಡೆಸಿದ ಸುಳ್ಯ ತಾಲ್ಲೂಕು ಮಟ್ಟದ ಗೀತ ಗಾಯನ ದೇಶ ಭಕ್ತಿಗೀತೆ ಯಲ್ಲಿ ಪ್ರಥಮ ಸ್ಥಾನ, ವಲಯ ಮಟ್ಟದಲ್ಲಿ ನಡೆದ ಪ್ರತಿಭಾ ಕಾರಂಜಿಯಲ್ಲಿ ಛದ್ಮವೇಷ ಮತ್ತು ಅಭಿನಯ ಗೀತೆಯಲ್ಲಿ ದ್ವಿತೀಯ ಸ್ಥಾನ, ೭೭ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಸುದ್ದಿ ಸಮೂಹ ಸಂಸ್ಥೆಗಳು ಆಯೋಜಿಸಿದ ಲಂಚ ಭ್ರಷ್ಟಾಚಾರದಲ್ಲಿ ಯುವಕರ ಪಾತ್ರ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಉದಯವಾಣಿ ತ್ರಿಕೆಯವರು ನಡೆಸಿದ ಆರ್ಟಿಸ್ಟ್ ಫೊರಂ (ರಿ) ಉಡುಪಿ, ಮಕ್ಕಳ ಚಿತ್ರಕಲಾ ಸ್ಪರ್ಧೆ ಚಿಣ್ಣರ ಬಣ್ಣ ೨೦೨೩ ರಲ್ಲಿ ಸಮಾಧಾನಕರ ಬಹುಮಾನ, ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಿದ ಅಂದದ ಕನ್ನಡ ಕೈ ಬರಹದಲ್ಲಿ ಪ್ರೋತ್ಸಾಹಕ ಬಹುಮಾನ, ನಮ್ಮ ಟಿ.ವಿ ಕುಡ್ಲ ಚಾನೆಲ್‌ನ ಡಾನ್ಸ್ ವಾರಿಯರ್‍ಸ್ ಸೀಸನ್-೨ ನಲ್ಲಿ ಸೆಮಿಫೈನಲ್‌ಗೆ ಆಯ್ಕೆ ಯಾಗಿದ್ದಾರೆ.
ಟೈಗರ್ ಡಾನ್ಸ್ ಪುತ್ತೂರು ತಂಡ ದಲ್ಲಿ ಪತ್ತೂರು, ಧರ್ಮಸ್ಥಳ, ಸುಳ್ಯ ಹೀಗೆ ಬೇರೆ ಬೇರೆ ಕಡೆಗಳಲ್ಲಿ ಪ್ರದರ್ಶಿಸಿ ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಯವರಿಂದ ಪೊಣ್ಣು ಪಿಲಿ ಎಂಬ ಪ್ರಶಂಸೆಗೊಳಪಟ್ಟಿರುತ್ತಾಳೆ.
ಇವರು ರುಕ್ಮಯ್ಯ ಹಾಗೂ ನಳಿನಿ ಕುರುಂಜಿಭಾಗ್‌ರವರ ಪುತ್ರಿ. ರೋಟರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಯ ಇಲ್ಲಿಯ ೭ನೇ ತರಗತಿ ವಿದ್ಯಾರ್ಥಿನಿ.