ಅಮರ ಸಂಘಟನಾ ಸಮಿತಿ (ರಿ) ಸುಳ್ಯ ಇದರ 2022-23 ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ 2023 – 24ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಡಿ.3 ರಂದು ಸಂಘಟನೆಯ ಅಧ್ಯಕ್ಷ ಪ್ರವೀಣ್ ಕುಲಾಲ್ ಅವರ ನೇತೃತ್ವದಲ್ಲಿ ಕುಕ್ಕುಜಡ್ಕದ “ಕೊರಗಭವನ”ದಲ್ಲಿ ನಡೆಯಿತು.
ಸಮಿತಿಯ ಖಜಾಂಜಿ ರಜನಿಕಾಂತ್ ಉಮಡ್ಕ 2022 -23ನೇ ಸಾಲಿನ ವಾರ್ಷಿಕ ಮಂಡನೆಯನ್ನು ನೆರವೇರಿಸಿ, ಸಮಿತಿಯ ವತಿಯಿಂದ ನಡೆದ ಕಾರ್ಯಕ್ರಮಗಳ ವಿವರ ಹಾಗೂ ಖರ್ಚು ವೆಚ್ಚಗಳ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಿದರು.
ಈ ಅವಧಿಯಲ್ಲಿ 15 ಕಾರ್ಯಕ್ರಮಗಳು ಸಂಘದ ಮೂಲಕ ನಡೆದಿರುವುದು ಸಮಿತಿಯ ಹೆಗ್ಗಳಿಕೆಗೆ ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ಸಂಘದ ಅಧ್ಯಕ್ಷ ಪ್ರವೀಣ್ ಕುಲಾಲ್ ರವರು ಮೆಚ್ಚುಗೆ ವಹಿಸಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡು ತಮ್ಮೊಂದಿಗೆ ಸಹಕರಿಸಿದ ಎಲ್ಲಾ ಸಮಿತಿಯ ಸದಸ್ಯರುಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು.
ಬಳಿಕ ಸಮಿತಿಯ 2023-24 ನೇ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
ನೂತನ ಅಧ್ಯಕ್ಷರಾಗಿ ಸಾತ್ವಿಕ್ ಮಡಪ್ಪಾಡಿ ಇವರನ್ನು ನೇಮಕ ಮಾಡಲಾಯಿತು. ಉಪಾಧ್ಯಕ್ಷರಾಗಿ ಮಿಥುನ್ ಕೆರೆಗದ್ದೆ, ಸಂಘದ ಕಾರ್ಯದರ್ಶಿಯಾಗಿ ಜಯಪ್ರಸಾದ್ ಸಂಕೇಶ, ಜತೆ ಕಾರ್ಯದರ್ಶಿಯಾಗಿ ಹಸ್ತವಿ ಮಡಪ್ಪಾಡಿ ಹಾಗೂ ಖಜಾಂಜಿಯಾಗಿ ಸೋಮಶೇಖರ ದೇವ ಇವರುಗಳನ್ನು ಆಯ್ಕೆ ಮಾಡಲಾಯಿತು.
ಇವರೊಂದಿಗೆ ಪ್ರದೀಪ್ ಬೊಳ್ಳೂರು, ಹರ್ಷಿತ್ ದಾತಡ್ಕ, ರಜನಿಕಾಂತ್ ಉಮಡ್ಕ, ಪ್ರವೀಣ್ ಕುಮಾರ್, ಕುಸುಮಾಧರ ಮುಕ್ಕೂರು, ಶಶಿಕಾಂತ್ ಮಿತ್ತೂರು, ಪ್ರಸಾದ್ ಬೊಳ್ಳೂರು, ಪ್ರಸಾದ್ ಕೆ ಹೆಚ್, ಶಿವಪ್ರಸಾದ್ ದೊಡ್ಡಿತ್ಲು, ಅನಿತಾ ಕುಕ್ಕುಜಡ್ಕ, ಹಿತೇಶ್ ನಾರ್ಕೋಡು, ಕೀರ್ತನ್ ಪಾರೆ, ಧನ್ಯ ರಾಜ್ ಪಿ ಟಿ, ಪ್ರಭಾಕರನ್ ಪೈಲಾರು, ಪ್ರಶಾಂತ್ ಕುಮಾರ್ ಕುದ್ಮಾರು, ಸ್ವಾತಿ ಪದವು, ಮಿಥುನ್ ಪೈಲಾರು ಹಾಗೂ ಮನೀಶ್ ಕಡಪಲ ಇವರುಗಳನ್ನು ಸಂಘದ ನಿರ್ದೇಶಕರುಗಳನ್ನಾಗಿ ಆಯ್ಕೆ ಮಾಡಲಾಯಿತು.
ಹಸ್ತವಿ ಮಡಪ್ಪಾಡಿ ಸ್ವಾಗತಿಸಿ, ಹರ್ಷಿತ್ ದಾತಡ್ಕರವರು ವಂದಿಸಿದರು.