ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲ ಇದರ ವಾರ್ಷಿಕೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ವಿವಿಧ ಸಾಹಿತ್ಯ ಹಾಗೂ ಕ್ರೀಡಾ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ವಿದ್ಯಾಬೋಧಿನಿ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ರಾಧಾಕೃಷ್ಣರಾವ್ ಯು ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಾ “ಸಾಧನೆ ಎಂಬುದು ರಕ್ತ ಗತವಾಗಿರಬೇಕು ಅದು ವ್ಯಕ್ತಿಗತವಾಗಿರಬಾರದು” ಎಂದು ನುಡಿದರು.
ಅಭ್ಯಾಗತರಾಗಿ ಆಗಮಿಸಿದ ಪ್ರದೀಪ್ ಕುಮಾರ್ ರೈ ಪನ್ನೆ ಪೂರ್ವ ವಲಯಾಧಿಕಾರಿಗಳು ಜೆಸಿಐ ಭಾರತ ಇವರು ಸಾಧಕ ವಿದ್ಯಾರ್ಥಿಗಳನ್ನು ಗೌರವಿಸುತ್ತಾ “ನಮ್ಮೊಳಗಿನ ಶಕ್ತಿಯ ಅರಿವೆ ಯಶಸ್ಸಿನ ಗುಟ್ಟು “ಎಂದು ನುಡಿದರು. ಸಮಾರಂಭದಲ್ಲಿ ವಿದ್ಯಾ ಬೋಧಿನಿ ಎಜುಕೇಶನಲ್ ಸೊಸೈಟಿಯ ಸಂಚಾಲಕರಾದ ಪಿ ಜಿ ಎಸ್ ಎನ್ ಪ್ರಸಾದ್, ಭಾರತೀ ಶಂಕರ ಆದಾಳ ಜೊತೆ ಕಾರ್ಯದರ್ಶಿಗಳು ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿ, ಕೈಂತಜೆ ರಾಮ ಭಟ್ ಕೋಶಾಧಿಕಾರಿಗಳು ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿ, ಶ್ರೀಮತಿ ತ್ರಿವೇಣಿ ಸದಸ್ಯರು ಗ್ರಾಮ ಪಂಚಾಯತ್ ಬಾಳಿಲ, ತಾರಾನಾಥ ಸದಸ್ಯರು ಗ್ರಾಮ ಪಂಚಾಯತ್ ಬಾಳಿಲ, ಜಯಂತ ಕೆ ಸಮೂಹ ಸಂಪನ್ಮೂಲ ವ್ಯಕ್ತಿಗಳು ಎಣ್ಮೂರು, ಧನಂಜಯ ಶೆಟ್ಟಿ ಅಧ್ಯಕ್ಷರು ಶಾಲಾ ಅಭಿವೃದ್ಧಿ ಸಮಿತಿ ಮತ್ತು ಮೇಲುಸ್ತುವಾರಿ ಸಮಿತಿ, ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯರಾದ ಯಶೋಧರ ನಾರಾಲು ಸ್ವಾಗತಿಸಿ, ಹಿರಿಯ ಶಿಕ್ಷಕರಾದ ಉದಯಕುಮಾರ್ ರೈ ಇವರು ವಂದಿಸಿದರು. ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ಶಿವಕೃಷ್ಣ ಎನ್ ಮತ್ತು ಪ್ರದೀಪ್ ಕೆ ಇವರು ಕಾರ್ಯಕ್ರಮ ನಿರೂಪಿಸಿದರು.