🔷 ಎಲ್ಲಾ ಸ್ಥಾನಗಳಿಗೂ ಅವಿರೋಧ ಆಯ್ಕೆ
ಪಂಜ ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರುಗಳ ಆಯ್ಕೆಗೆ ಚುನಾವಣೆಗೆ 13 ಸ್ಥಾನವಿದ್ದು. ಕೇವಲ 12 ನಾಮಪತ್ರ ಸಲ್ಲಿಕೆಯಾಗಿದ್ದು ಮತದಾನ ನಡೆಯದೆ ಅವಿರೋಧ ಆಯ್ಕೆಯಾಗಿದೆ.
ಏಳು ಮಂದಿ ಸಾಮಾನ್ಯ ಸ್ಥಾನದಿಂದ, ತಲಾ ಒಬ್ಬರು ಪ.ಜಾತಿ ಮೀಸಲು ಸ್ಥಾನ, ಪ.ಪಂಗಡ ಮೀಸಲು ಸ್ಥಾನ, ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಸ್ಥಾನ ಹಾಗೂ ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಸ್ಥಾನದಿಂದ ಹಾಗೂ ಎರಡು ಮಂದಿ ಮಹಿಳಾ ಮೀಸಲು ಸ್ಥಾನದಿಂದ ನಿರ್ದೇಶಕರುಗಳ ಆಯ್ಕೆಯಾಗ ಬೇಕಾಗಿತ್ತು. ಪ.ಜಾತಿ ಸ್ಥಾನಕ್ಕೆ ಅರ್ಹ ಅಭ್ಯರ್ಥಿಗಳು ಇಲ್ಲದಿರುವುದರಿಂದ ಆ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗಿಲ್ಲ.
ಸಾಮಾನ್ಯ ಸ್ಥಾನದಿಂದ ನಾರಾಯಣ ನಾಯ್ಕ ಚಾಳೆಗುಳಿ,ಉದಯ ಬಿಡಾರಕಟ್ಟೆ, ಮೋನಪ್ಪ ಕೆಬ್ಲಾಡಿ, ಗಣೇಶ್ ಪಾಲೋಳಿ , ಪೆರ್ಗಡೆ ಕಾಣಿಕೆ, ಮೋನಪ್ಪ ನೆಕ್ಕಿಲ, ಜಯಂತ ಕುಳ್ಳಕೋಡಿ ,ಪ.ಪಂಗಡ ಮೀಸಲು ಸ್ಥಾನಕ್ಕೆ ಪದ್ಮಯ್ಯ ನಾಯ್ಕ ಸಂಪ, ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಸ್ಥಾನಕ್ಕೆ ಭಾಸ್ಕರ್ ನಾಯಕ್ ಬೇರ್ಯ, ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಸ್ಥಾನಕ್ಕೆ ಚನಿಯಪ್ಪ ಗೌಡ ಕುಳ್ಳಕೋಡಿ, ಮಹಿಳಾ ಮೀಸಲು ಸ್ಥಾನಕ್ಕೆ ಶ್ರೀಮತಿ ಲಕ್ಷ್ಮೀ ನೇರಳ, ಶ್ರೀಮತಿ ಯಶೋದ ಬರೆಮೇಲು ರವರು
ನಾಮಪತ್ರ ಸಲ್ಲಿಸಿದ್ದು ಈ ಎಲ್ಲಾ ಸ್ಥಾನಗಳಿಗೆ ಪ್ರತಿ ಸ್ಪರ್ಧಿಗಳು ಇಲ್ಲದಿರುವುದರಿಂದ ಅವಿರೋಧ ಆಯ್ಕೆಯಾಗಿದ್ದಾರೆ.
ಡಿ.13ರಂದು ನಾಮಪತ್ರಗಳ ಪರಿಶೀಲನೆ ನಡೆಯಿತು.ಅಂದೇ ರಿಟರ್ನಿಂಗ್ ಅಧಿಕಾರಿಯವರಿಂದ ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಂಡಿತ್ತು.ಡಿ.14 ಅಭ್ಯರ್ಥಿಗಳಿಗೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಯಾವುದೇ ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯದೆ ಮತ್ತು ಸ್ಪರ್ಧಿಗಳು ಇಲ್ಲದಿರುವುದರಿಂದ ಮತದಾನ ನಡೆಯದೆ ಅವಿರೋಧ ಆಯ್ಕೆಯಾಗಿದ್ದಾರೆ. ಸಹಕಾರ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ ಎಂ ರಿಟರ್ನಿಂಗ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.ಸಂಘದ
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದರ್ಶ ಸಿ ಸಹಕರಿಸಿದರು.