ಸುಬ್ರಹ್ಮಣ್ಯನ ಕ್ಷೇತ್ರದಲ್ಲಿ ಕುಣಿದ ಭಜಕರಿಗೆ ಮಳೆ ಅಡ್ಡಿಯೇ ಅಲ್ಲ
ಚಂದ್ರಮಂಡಲೋತ್ಸವ, ಉರುಳು ಸೇವೆ ಆರಂಭ
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿ.12 ರಂದು ಶ್ರೀ ದೇವರ ಲಕ್ಷದೀಪೋತ್ಸವ ವಿಜ್ರಂಭಣೆಯಿಂದ ನಡೆಯಿತು. ಲಕ್ಷದೀಪೋತ್ಸವದೊಂದಿಗೆ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ ನಡೆದಿದ್ದು . ಧಾರಕಾರ ಮಳೆ ಸುರಿದರೂ ಭಜಕರು ಒಂಚೂರು ಕದಲದೆ ಸುಬ್ರಹ್ಮಣ್ಯನ ಕ್ಷೇತ್ರದಲ್ಲಿ ಕುಣಿದ ಭಜಕರಿಗೆ ಮಳೆ ಅಡ್ಡಿಯೇ ಅಲ್ಲ ಎಂಬುದನ್ನು ತೋರಿಸಿಕೊಟ್ಟರು. 2000 ಕ್ಕೂ ಅಧಿಕ ಮಂದಿ ಭಜಕರು ಕುಣಿತ ಭಜನೆಯಲ್ಲಿ ಪಾಲ್ಗೊಂಡರು.
ಮಹಾಪೂಜೆಯ ಬಳಿಕ ಶ್ರೀ ದೇವರ ಹೊರಾಂಗಣ ಉತ್ಸವವು ಆರಂಭವಾಯಿತು. ಪ್ರಥಮವಾಗಿ ಕಾಚುಕುಜುಂಬ ದೈವವು ಶ್ರೀ ದೇವರನ್ನು ಭೇಟಿಯಾಗಿ ನುಡಿಗಟ್ಟು ನಡೆಯಿತು.
ಸಾಲುದೀಪಗಳ ನಡುವೆ ಶ್ರೀ ದೇವರ ಶೇಷವಾಹನಯುಕ್ತ ಬಂಡಿ ಉತ್ಸವ ಮತ್ತು ಪಾಲಕಿ ಉತ್ಸವ ನೆರವೇರಿತು.
ರಥಬೀದಿಯಲ್ಲಿ ಶ್ರೀ ದೇವರ ರಥೋತ್ಸವ ಆಗಿದ್ದು ರಾತ್ರಿ ಪಂಚ ಶಿಖರಗಳನ್ನೊಳಗೊಂಡ ಚಂದ್ರಮಂಡಲೋತ್ಸವ ನೇರವೇರಿತು. ಸುಬ್ರಹ್ಮಣ್ಯದಾದ್ಯಂತ ಸಾವಿರಾರು ದೀಪಗಳು ಬೆಳಗಿದವು. ಮಳೆ ಅಡ್ಡಿ ಮಾಡಿತ್ತಾದರೂ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಬೀದಿ ಉರುಳು ಸೇವೆ ಆರಂಭವಾಗಿದ್ದು ಲಕ್ಷದೀಪೋತ್ಸವ ರಥೋತ್ಸವದ ಬಳಿಕ ಆರಂಭವಾಗಿದ್ದು ಚಂಪಾಷಷ್ಠಿ ಮಹಾರಥೋತ್ಸವದ ತನಕ ನಡೆಯಲಿದೆ.