ಬಳ್ಪ ಕಮಿಲ ಕ್ರಾಸ್ ಸತ್ತ ಮಂಗಗಳ ರಾಶಿ

0

ಮೂವತ್ತಕ್ಕೂ ಅಧಿಕ ಮಂಗಗಳ ಮೃತದೇಹ ಎಸೆದು ಹೋದವರ್ಯಾರು?

ಬಳ್ಪ ಸಮೀಪದ ಕಮಿಲ ಕ್ರಾಸ್ ನ ರಸ್ತೆಯ ಬದಿಯ ಕಾಡಿನಲ್ಲಿ 30ಕ್ಕೂ ಹೆಚ್ಚು ಮಂಗಗಳ ಮೃತದೇಹ ಕಂಡು ಬಂದಿದೆ.

ರಸ್ತೆಯಿಂದ 100 ಮೀಟರ್ ದೂರದಲ್ಲಿ ಈ ಸತ್ತ ಮಂಗಗಳ ರಾಶಿ ಕಂಡು ಬಂದಿದ್ದು, ಮಂಗಗಳನ್ನು ಕೊಂದು ಇಲ್ಲಿ ಹಾಕಿ ಹೋಗಿರಬಹುದೆಂದ ಶಂಕಿಸಲಾಗಿದೆ.

ಇಂದೇ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ನಾಳೆಯಿಂದ ರಸ್ತೆ ಬದಿಯಲ್ಲಿ ದುರ್ವಾಸನೆಯಿಂದ ಬೀರಿ ನಡೆದಾಡಲು ಅಸಾಧ್ಯವಾದಂತ ವಾತಾವರಣ ಆಗಬಹುದೆಂದು ಊರಿನವರು ಹೇಳುತ್ತಾರೆ.