ಸವಣೂರು ಸೀತಾರಾಮ ರೈಯವರಿಂದ ಶೈಕ್ಷಣಿಕ ಕ್ರಾಂತಿ

0

ಗ್ರಾಮೀಣ ಪ್ರದೇಶವಾಗಿರುವ ಸವಣೂರಿನಲ್ಲಿ ೨೦೦೧ರಲ್ಲಿ ಅತ್ಯುತ್ತಮವಾದ, ಎಲ್ಲಾ ರೀತಿಯ ಸೌಕರ್‍ಯದಿಂದ ಕೂಡಿದ ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ, ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈಯವರು ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ್ದಾರೆ ಎಂದು ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿಶ್ರಾಂತ ಮುಖ್ಯಗುರು ಎಚ್. ಶ್ರೀಧರ್ ರೈ ಹೇಳಿದರು.


ಅವರು ದ. ೧೫ ರಂದು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಾರ್ಷಿಕ ಕಾರ್‍ಯಕ್ರಮ `ಸಮ್ಮಾನ ರಶ್ಮಿ’ಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡಿ, ಹಿಂದಿನ ಕಾಲದ ಶಿಕ್ಷಣಕ್ಕೂ ಈಗಿನ ಕಾಲದ ಶಿಕ್ಷಣಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಇಂದು ಕಂಪ್ಯೂಟರ್ ನೋಡಿಯೂ ಶಿಕ್ಷಣವನ್ನು ಪಡೆಯಬಹುದು, ಆಧುನಿಕ ಕಾಲದಲ್ಲಿ ಶಿಕ್ಷಣದ ಮೌಲ್ಯವನ್ನು ಹೆಚ್ಚಿಸಬೇಕಾದರೆ, ಮಕ್ಕಳ ಪಠ್ಯ ಕಲಿಕೆಯ ಬಗ್ಗೆ ಹೆತ್ತವರು ನಿಗಾ ವಹಿಸಬೇಕು, ಮನೆಯಲ್ಲಿ ಪೋಷಕರು ದೂರದರ್ಶನವನ್ನು ವೀಕ್ಷಣೆ ಮಾಡುವ ಪ್ರವೃತ್ತಿಯನ್ನು ಬಿಟ್ಟು, ಮಗುವಿನ ಜೊತೆ ಪಠ್ಯದಲ್ಲಿ ಸಹಾಯ ಮಾಡಿದಾಗ ಮಗುವಿನ ಶೈಕ್ಷಣಿಕ ಪ್ರಗತಿ ಉನ್ನತವಾಗಿ ಗಟ್ಟಿಯಾಗುತ್ತದೆ ಎಂದು ಹೇಳಿದ ಶ್ರೀಧರ್ ರೈಯವರು ಸೀತಾರಾಮ ರೈಯವರ ಶಿಸ್ತಿನ ಜೀವನ ಕ್ರಮ, ಶೈಕ್ಷಣಿಕ ಕಾಳಜಿಯನ್ನು ನಾವೆಲ್ಲ ನೋಡಿzವೆ. ಮುಂದೆಯೂ ವಿದ್ಯಾರಶ್ಮಿ ಅತ್ಯುತ್ತಮವಾದ ಹೆಸರನ್ನು ರಾಜ್ಯದಲ್ಲಿ ಪಡೆಯಲಿ ಎಂದು ಹಾರೈಸಿದರು.

ಸಂಭ್ರಮಕ್ಕೆ ಸಾಕ್ಷಿ-ಸೀತಾರಾಮ ರೈ: ಕಾರ್‍ಯಕ್ರಮ ಉದ್ಘಾಟಿಸಿದ ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಕೆ.ಸೀತಾರಾಮ ರೈಯವರು ವಾರ್ಷಿಕ ಉತ್ಸವ ವಿದ್ಯಾರ್ಥಿಗಳ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ. ಕಲಿಕೆಯನ್ನು ಅರ್ಥಪೂರ್ಣವಾಗಿ ಮಾಡಿಕೊಂಡಲ್ಲಿ ಯಶಸ್ಸು ಖಂಡಿತ, ಮುಂಬರುವ ವಾರ್ಷಿಕ ಪರೀಕ್ಷೆಗೆ ಇನ್ನು ಮೂರು ತಿಂಗಳು ಬಾಕಿ ಇದ್ದು, ಸತತ ಪರಿಶ್ರಮದೊಂದಿಗೆ ಭವಿಷ್ಯದ ಕಾಳಜಿಯೊಂದಿಗೆ ವಿದ್ಯಾರ್ಥಿಗಳು ಮುಂದೆ ಸಾಗುವಂತೆ ಶುಭಹಾರೈಸಿದರು.


ಬಹುಮಾನ ವಿತರಣೆ: ಕಲಿಕೆ ಹಾಗೂ ಪಠ್ಯತೇರ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಪ್ರಶಸ್ತಿ ಪತ್ರದೊಂದಿಗೆ ನೀಡಿ ಗೌರವಿಸಲಾಯಿತು.


ಅಧ್ಯಕ್ಷತೆಯನ್ನು ವಿದ್ಯಾ
ರಶ್ಮಿ ಸಂಸ್ಥೆಯ ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ ಸವಣೂರು ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಟ್ರಸ್ಟಿ ಸವಣೂರು ಎನ್.ಸುಂದರ ರೈ, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮ್‌ಪ್ರಸಾದ್ ರೈ ಕಲಾಯಿ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ, ವಿದ್ಯಾರಶ್ಮಿ ಪ್ರಥಮ ದರ್ಜೆಕಾಲೇಜಿನ ಪ್ರಾಂಶುಪಾಲ ನಾರಾಯಣ ಮೂರ್ತಿ ಉಪಸ್ಥಿತರಿದ್ದರು. ಖದೀಜತ್ ಅಜಿಲಾ ಸ್ವಾಗತಿಸಿ, ವಿದಿಶಾ ವಂದಿಸಿದರು. ಸ್ವರ್ಶ ಜೆ.ಶೆಟ್ಟಿ ಕಾರ್‍ಯಕ್ರಮ ನಿರೂಪಿಸಿದರು. ಸಂವಿಧಾನ ಪೀಠಿಕೆಯನ್ನು ಎಚ್.ಎಸ್ ಶ್ರುತ ಜೈನ್ ವಾಚಿಸಿದರು.ಸಮಾರಂಭದಲ್ಲಿ ವಿದ್ಯಾರಶ್ಮಿ ಸಂಸ್ಥೆಯ ಟ್ರಸ್ಟಿ ರಶ್ಮಿ ಆಶ್ವಿನ್ ಶೆಟ್ಟಿ, ಉಪಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವ, ಪಿಯುಸಿ ವಿಭಾಗದ ಸಂಯೋಜಕಿ ಕಸ್ತೂರಿ ಕೆ,ಜಿ, ರಕ್ಷಕ-ಶಿಕ್ಷಕದ ಪದಾಧಿಕಾರಿಗಳಾದ ಸುರೇಶ್ ರೈ ಸೂಡಿಮುಳ್ಳು, ಅಬ್ದುಲ್ಲಾ ಸೊಂಪಾಡಿ, ಮಣಿ ಎಂ ರೈ ನಡುಮನೆ ಸೇರಿದಂತೆ ಪೋಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು. ವಿದುಷಿ ಪಾರ್ವತಿ ಪದ್ಯಾಣರವರಿಂದ ಸುಗಮ ಸಂಗೀತ ನಡೆಯಿತು.

ದ. ೧೬ ರಂದು ಸಂಜೆ ೫.೩೦ ರಿಂದ ವಿದ್ಯಾರಶ್ಮಿ ವಿದ್ಯಾಲಯದ ವಾರ್ಷಿಕೋತ್ಸವ `ಸಂಭ್ರಮ ರಶ್ಮಿ’ ನಡೆಯಲಿದೆ. ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಗಿರೀಶ್ ನಂದನ್, ಎಕ್ಸ್‌ಲೆಂಟ್ ವಿದ್ಯಾಸಂಸ್ಥೆಯ ಚೇರ್ ಮ್ಯಾನ್ ಯುವರಾಜ್ ಜೈನ್, ಮಂಗಳೂರು ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣರಾಜ್ ಹೆಗ್ಡೆರವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಸಂಚಾಲಕ ಸವಣೂರು ಕೆ.ಸೀತಾರಾಮ ರೈ, ಆಡಳಿತಾಧಿಕಾರಿ ಆಶ್ವಿನ್ ಎಲ್ ಶೆಟ್ಟಿ ಹಾಗೂ ಪ್ರಾಂಶುಪಾಲ ಸೀತಾರಾಮ ಕೇವಳರವರು ತಿಳಿಸಿದ್ದಾರೆ.