ಅರಂತೋಡು: ಹೋಟೆಲ್ ನಿಶಿ ಶುಭಾರಂಭ

0

ಅರಂತೋಡಿನ ಮುಖ್ಯರಸ್ತೆಯ ಪಕ್ಕದಲ್ಲಿರುವ ನಾರ್ಕೋಡು ಕಾಂಪ್ಲೆಕ್ಸ್ ನಲ್ಲಿ ಶ್ರೀಮತಿ ಮತ್ತು ಶ್ರೀ ರೋಹಿತ್ ಚಿದ್ಗಲ್ ಅವರ ಮಾಲಕತ್ವದ ಹೋಟೆಲ್ ನಿಶಿ ಡಿ.15ರಂದು ಶುಭಾರಂಭಗೊಂಡಿತು.

ಬೆಳಿಗ್ಗೆ ಗಣಪತಿ ಹವನ ಜರುಗಿದ ಬಳಿಕ ಅರಂತೋಡು ಗ್ರಾ.ಪಂ. ಅಧ್ಯಕ್ಷ ಕೇಶವ ಅಡ್ತಲೆ ಅವರು ನೂತನ ಹೋಟೆಲನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಅರಂತೋಡು – ತೊಡಿಕಾನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಉಪಾಧ್ಯಕ್ಷ ದಯಾನಂದ ಕುರುಂಜಿ, ಕೆ.ಆರ್. ಪದ್ಮನಾಭ, ನಾರ್ಕೋಡು ಕಾಂಪ್ಲೆಕ್ಸ್ ಮಾಲಕ ನಾರಾಯಣ ಗೌಡ, ಶ್ರೀನಿವಾಸ ಮಡ್ತಿಲ, ತೀರ್ಥರಾಮ ಅಡ್ಕಬಳೆ, ಪುರುಷೋತ್ತಮ ಉಳುವಾರು ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.