ಅರಂಬೂರು ಮೂಕಾಂಬಿಕಾ ಭಜನಾ ಮಂದಿರದ ಸುವರ್ಣ ಮಹೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆ

0

ಅರಂಬೂರು ಪರಿಸರದಲ್ಲಿರುವ
ಶ್ರೀ ಮೂಕಾಂಬಿಕಾ ಭಜನಾ ಮಂದಿರಕ್ಕೆ
50 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಮುಂದಿನ 2024 ರ ಫೆಬ್ರವರಿ 13, 14, 15 ರಂದು ನಡೆಯಲಿರುವ ಸುವರ್ಣ ಮಹೋತ್ಸವದ ಪ್ರಯುಕ್ತ ಮನೆ ಭೇಟಿ ಕಾರ್ಯಕ್ರಮದ ಅಂಗವಾಗಿ ವಿಜ್ಞಾಪನಾ ಪತ್ರವನ್ನು ಭಜನಾ ಮಂದಿರದಲ್ಲಿ ಡಿ.17 ರಂದು ಬಿಡುಗಡೆ ಮಾಡಲಾಯಿತು.

ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಊರಿನ ಪ್ರತಿ ಮನೆಯಿಂದ
ಶ್ರೀ ಮೂಕಾಂಬಿಕಾ ದೇವಿಯ ಬಿಂಬಕ್ಕೆ ಬೆಳ್ಳಿಯನ್ನು ಸ್ವೀಕರಿಸಿ ಅದರಿಂದಲೇತಯಾರಿಸಿದ ದೇವಿಯ ಬೆಳ್ಳಿಯ ಭಾವಚಿತ್ರವನ್ನು ಪ್ರತಿಷ್ಠೆ ಮಾಡುವ ಸಲುವಾಗಿ ಹಾಗೂ ಅಭಿವೃದ್ಧಿ ಕಾರ್ಯಗಳ ಜೊತೆಗೆ
3 ದಿನಗಳ ಕಾಲ ನಡೆಯಲಿರುವ ಮಹೋತ್ಸವದ ಕಾರ್ಯಕ್ರಮದ ಬಾಬ್ತು ದೇಣಿಗೆ ಸಂಗ್ರಹಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಬಿ. ಶ್ರೀಪತಿ ಭಟ್ ಮಜಿಗುಂಡಿ, ಕಾರ್ಯಾಧ್ಯಕ್ಷ ಕೃಷ್ಣಪ್ಪ ಕೆ. ಎಸ್ ಕೆದಂಬಾಡಿ, ಸಿರಿಕುರಲ್ ಕ್ಷೇತ್ರದ ಉತ್ಸವ ಸಮಿತಿ ಗೌರವಾಧ್ಯಕ್ಷ ವಾಸುದೇವ ಗೌಡ ಕುಡೆಕಲ್ಲು,
ಭಜನಾ ಮಂದಿರದ ಅಧ್ಯಕ್ಷ ರತ್ನಾಕರ ರೈ ಅರಂಬೂರು,
ಕಾರ್ಯದರ್ಶಿಬಂಗಾರುಭಾರದ್ವಾಜ್,ಪಂ.ಮಾಜಿ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು,
ಪಂ.ಸದಸ್ಯ ಸುಧೇಶ್ ಅರಂಬೂರು, ರತೀಶನ್ ಅರಂಬೂರು,
ವೇದಾವತಿ‌ ನೆಡ್ಚಿಲು,
ಕೋಶಾಧಿಕಾರಿ ನಾರಾಯಣ ನಾಯ್ಕ ಅರಂಬೂರು,
ಅರಂಬೂರು ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ ನೆಡ್ಚಿಲು, ಗಣಪತಿ ಭಟ್ ಮಜಿಗುಂಡಿ,ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಈಶ್ವರ ಕುಲಾಲ್ ಮಜಿಗುಂಡಿ,
ಸಿರಿಕುರಲ್ ಕ್ಷೇತ್ರದ ಉತ್ಸವ ಸಮಿತಿ ಅಧ್ಯಕ್ಷ ಕರುಣಾಕರ ಪಾಲಡ್ಕ, ಕಾರ್ಯದರ್ಶಿ ಜನಾರ್ದನ ಚೊಕ್ಕಾಡಿ ಸಿರಿಕುರಲ್ , ಗಣೇಶ್,ಸಮಿತಿಉಪಕಾರ್ಯದರ್ಶಿ ಪುಷ್ಪರಾಜ್ ಕುಲಾಲ್,ಮಂದಿರದ ಕಾರ್ಯದರ್ಶಿ ಪ್ರೀತಿಕ್ ಕುಲಾಲ್ ಮಜಿಗುಂಡಿ, ಕೋಶಾಧಿಕಾರಿಶಿವಪ್ರಕಾಶ ಸರಳಿಕುಂಜ ಹಾಗೂ ಸಮಿತಿಯ
ಪದಾಧಿಕಾರಿಗಳು,
ಸದಸ್ಯರು
ಭಾಗವಹಿಸಿದರು.