ಚೊಕ್ಕಾಡಿ : “ಬಲೆ ತುಳು ಲಿಪಿ ಕಲ್ಪುಗ” ಕಜ್ಜ ಕೋಟ್ಯದ ಉದಿಪನ ಲೇಸ್

0


ಮಯೂರಿ ಯುವತಿ ಮಂಡಲ ಚೊಕ್ಕಾಡಿ ಇವರ ಆಶ್ರಯದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಜೈ ತುಳುನಾಡ್ ಇವರ ಸಹಯೋಗದೊಂದಿಗೆ “ಬಲೆ ತುಳು ಲಿಪಿ ಕಲ್ಪುಗ” ಕಜ್ಜ ಕೋಟ್ಯದ ಉದಿಪನ ಲೇಸ್ ಎಂಬ ಕಾರ್ಯಕ್ರಮ ದ ಉದ್ಘಾಟನೆಯನ್ನು ಚೊಕ್ಕಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಕಟ್ಟಡದಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶೇಣಿ ಗರಡಿ ಶ್ರೀ ಕೋಟಿ ಚೆನ್ನಯ ಬೈದರ್ಕಳದ ಅನುವಂಶೀಯ ಆಡಳ್ತೆದಾರ ಬಿ.ಕೆ. ಧರ್ಮಪಾಲ ಶೇಣಿ, ಜೈ ತುಳುನಾಡು ಇದರ ಅಧ್ಯಕ್ಷ ವಿಶು ಶ್ರೀಕೇರ, ಯುವಜನ ಸಂಯುಕ್ತ ಮಂಡಳಿಯ ಉಪಾಧ್ಯಕ್ಷ ವಿಜಯಕುಮಾರ್ ಅತಿಥಿಗಳಾಗಿ ಭಾಗವಹಿಸಿದ್ದರು ಹಾಗೂ ಮಯೂರಿ ಯುವತಿ ಮಂಡಲದ ಅಧ್ಯಕ್ಷೆ ಸ್ವಾತಿ ಪದವು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕು. ದಿಶಾ ಪ್ರಾರ್ಥಿಸಿದರು. ದಿವ್ಯ ನಡುಗಲ್ಲು ಸ್ವಾಗತಿಸಿ, ಉಷಾಲತಾ ಪಡ್ಪು ವಂದಿಸಿದರು. ಗರುಡ ಯುವಕ ಮಂಡಲದ ಅಧ್ಯಕ್ಷ ಮನೋಜ್ ಪಡ್ಪು ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ತುಳು ಲಿಪಿ ಕಳುಹಿಸಿ ಕೊಡಲು ಬಂದಿರುವ ಹಾಗೂ ಪ್ರಸ್ತಾವಿಕ ಮಾತುಗಳನ್ನಾಡಿದ ಕು. ಚಿತ್ರಾಕ್ಷಿ ಟಿ. ತೆಗ್ಗು ಹಾಗೂ ಜಗದೀಶ ಗೌಡ ಕಲ್ಕಳ ಜೈ ತುಳುನಾಡು ಸಂಘಟನೆಯ ಸದಸ್ಯರು ಮತ್ತು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನ ಸದಸ್ಯರು, ಗರುಡ ಯುವಕ ಮಂಡಲದ ಸದಸ್ಯರು, ಮಯೂರಿ ಯುವತಿ ಮಂಡಲದ ಸದಸ್ಯರು, ಹಾಗೂ ಬಾಲಗೋಕುಲದ ಮಕ್ಕಳು, ಸಾರ್ವಜನಿಕರು ಇದ್ದರು.