ಅರಂತೋಡು ಹಾಲು ಉತ್ಪಾದಕ ಸಹಕಾರ ಸಂಘದ ಚುನಾವಣೆ

0

ಒಟ್ಟು ಹನ್ನೊಂದು ಮಂದಿಯಿಂದ ನಾಮಪತ್ರ ಸಲ್ಲಿಕೆ- ಅವಿರೋಧ ಆಯ್ಕೆ ಸಂಭವ

ಅರಂತೋಡು ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರುಗಳ ಆಯ್ಕೆಗೆ ಚುನಾವಣೆಯು ಡಿ.31ರಂದು ಸಂಘದ ಆವರಣದಲ್ಲಿ ನಡೆಯಲಿದ್ದು, ಡಿ.19ರಿಂದ ನಾಮಪತ್ರಗಳ ಸಲ್ಲಿಕೆ ಆರಂಭಗೊಂಡಿದ್ದು, ಇದುವರೆಗೆ ಒಟ್ಟು 11 ಮಂದಿ ನಾಮಪತ್ರ ಸಲ್ಲಿಸಿದ್ದು, ಅವಿರೋಧವಾಗಿ ಆಯ್ಕೆಯಾಗುವ ಸಂಭವವಿದೆ.

ಇಲ್ಲಿ ಒಟ್ಟು 13 ಮಂದಿ ನಿರ್ದೇಶಕರುಗಳ ಆಯ್ಕೆಯಾಗಬೇಕಿದ್ದು, ಸಾಮಾನ್ಯ ಸ್ಥಾನದಿಂದ ಭಾರತಿ ಯು., ಚಂದ್ರಪ್ರಕಾಶ್ ಪಿ.ಎಂ., ಗಂಗಾಧರ ಯು.ಡಿ., ಜನಾರ್ದನ ಸಿ. ಚೋಡಿಪಣೆ, ಕಿರಣ್ ಎಸ್., ಮೋಹನ ಎ., ನಾರಾಯಣ ಕೆ‌.ಸಿ., ಪ್ರಮೀಳ ಪಿ., ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಸ್ಥಾನದಿಂದ ಮಾಲಿನಿ ಯು.ವಿ. ಮಹಿಳಾ ಮೀಸಲು ಸ್ಥಾನದಿಂದ ಗೀತಾ ಸರಸ್ವತಿ ಮತ್ತು ಜಾನಕಿ ಸೇರಿದಂತೆ ಒಟ್ಟು 13 ಸ್ಥಾನಗಳ ಪೈಕಿ 11 ಮಂದಿ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಇಬ್ಬರು ನಿರ್ದೇಶಕರ ಆಯ್ಕೆಯಾಗಬೇಕಿದ್ದು, ಇದುವರೆಗೆ ಯಾರೂ ನಾಮಪತ್ರ ಸಲ್ಲಿಸಿಲ್ಲ.
ಡಿ.24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಳೆಯೇ, ರಿಟರ್ನಿಂಗ್ ಅಧಿಕಾರಿಯವರಿಂದ ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಳಿಸಲಿದ್ದು, , ಡಿ.25 ಅಭ್ಯರ್ಥಿಗಳಿಗೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಈಗಾಗಲೇ ಒಂದೊಂದು ಸ್ಥಾನಕ್ಕೆ ಒಂದೊಂದೇ ನಾಮಪತ್ರಗಳು ಬಂದಿದ್ದು, ಅವಿರೋಧವಾಗಿ ಆಯ್ಕೆಯಾಗುವ ಸಂಭವ ಹೆಚ್ಚಾಗಿದೆ.