ಪಂಜ :ಜೇಸಿ ಸಪ್ತಾಹ-ಸಮಾರೋಪ ಸಮಾರಂಭ

0


🔹 ಗುರುಪ್ರಸಾದ್ ತೋಟ ರವರಿಗೆ ಕಮಲ ಪತ್ರ ಪುರಸ್ಕಾರ

🔹 ಪಂಚಶ್ರೀ ವಿದ್ಯಾನಿಧಿ ವಿತರಣೆ

ಜೇಸಿಐ ಪಂಜ ಪಂಚಶ್ರೀ ಇದರ ಜೇಸಿ ಸಪ್ತಾಹ 2023 ಸಮಾರೋಪ ಸಮಾರಂಭ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಡಿ.25 ರಂದು ನಡೆಯಿತು.

ಸಭಾಧ್ಯಕ್ಷತೆಯನ್ನು ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಲೋಕೇಶ್ ಆಕ್ರಿಕಟ್ಟೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಪಂಬೆತ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಾಕೆ ಮಾಧವ ಗೌಡ ರವರು ಮಾತನಾಡಿ
“ಜೇಸಿಐ ಪಂಜ ಪಂಚಶ್ರೀಯಲ್ಲಿ ನುರಿತ ತರಬೇತುದಾರರಿದ್ದಾರೆ.
ಉತ್ತಮ ಪೂರ್ವಾಧ್ಯಕ್ಷರು, ಸದಸ್ಯರಿದ್ದಾರೆ ಇದರಿಂದಾಗಿ ಘಟಕ ಗಟ್ಟಿಯಾಗಿ
ಬೆಳೆದಿದೆ. ಜನರಿಗೆ ಬೇಕಾಗುವ ಕಾರ್ಯಕ್ರಮಗಳು, ಸೇವೆಗಳನ್ನು ನೀಡಿ ಪ್ರತಿ ಮನೆ ಮನಗಳನ್ನು ಗೆದ್ದಿದ್ದಾರೆ”.ಎಂದು ಅವರು ಹೇಳಿದರು.

ವಲಯ15 ರ ವಲಯಾಧ್ಯಕ್ಷ ಪುರುಷೋತ್ತಮ್ ಶೆಟ್ಟಿ ರವರು
ಘಟಕದ ನಿಕಟಪೂರ್ವಾಧ್ಯಕ್ಷ ಗುರುಪ್ರಸಾದ್ ತೋಟ ರವರಿಗೆ ಕಮಲ ಪತ್ರ ಪುರಸ್ಕಾರ ನೀಡಿ ಗೌರವಿಸಿ ಮಾತನಾಡಿ”ಜೇಸಿ ಪಂಜ ಪಂಚಶ್ರೀ ಗೆ ವಲಯದಲ್ಲಿ ಅದರದೇ ಆದ ಹಿರಿತನವಿದೆ. ಯಾವುದೇ ಒಂದು ಕಾರ್ಯಕ್ರಮವನ್ನುಅದು ಅಷ್ಟು ಅಚ್ಚುಕಟ್ಟಾಗಿ ಶಿಸ್ತಿನಿಂದ ಮಾಡಿಕೊಂಡು ಬಂದಿರುವ ಘಟಕ ಎಂದು ಹೇಳಲು ಹೆಮ್ಮೆ ಹಾಗೂ ಸಂತೋಷವಾಗುತ್ತದೆ.ಇವರು ಘಟಕಕ್ಕೆ
ಪ್ರಶಸ್ತಿ ಮನ್ನಣೆಗಾಗಿ ಕಾರ್ಯಕ್ರಮ ಮಾಡುವುದಿಲ್ಲ.ಕಾರ್ಯಕ್ರಮದ ಉದ್ದೇಶವನ್ನು ನೂರಕ್ಕೆ ನೂರು ಯಶಸ್ವಿ ಗೊಳಿಸುತ್ತಾರೆ.ಘಟಕದ ಕಾರ್ಯಕ್ರಮದ ಕುರಿತು ರಾಷ್ಟ್ರ ಮಟ್ಟದಲ್ಲೂ ಗಮನ ಸೆಳೆದಿದ್ದೇನೆ. ಈ ಘಟಕದ ವತಿಯಿಂದ ಪ್ರತಿ ವರುಷ ನಡೆಯುವ ಹುಚ್ಚು ನಾಯಿ ನಿರೋಧಕ ಲಸಿಕೆ ವಿಶೇಷ ಕಾರ್ಯಕ್ರಮವನ್ನು ವಲಯಾದ್ಯಂತ ಅಳವಡಿಸಲು ಹೇಳಿದ್ದೇನೆ.”ಎಂದು ಅವರು ಹೇಳಿದರು.

ಕಮಲ ಪತ್ರ ಪುರಸ್ಕಾರ ಸ್ವೀಕರಿಸಿ ಗುರುಪ್ರಸಾದ್ ತೋಟ ರವರು ಮಾತನಾಡಿ’ನಮ್ಮ ಜೀವನಕ್ಕೆ ಪ್ರತಿಯೊಂದನ್ನೂ ಜೇಸಿ ಕಲಿಸಿ ಕೊಡುತ್ತದೆ. ವ್ಯಕ್ತಿತ್ವ ನಿರ್ಮಾಣದ ಹುಟ್ಟಿ ಕೊಂಡ ಸಂಸ್ಥೆ ಜೇಸಿ ಅಂತಾರಾಷ್ಟ್ರೀಯ ಸಂಸ್ಥೆ. ನನಗೆ ಬಹಳಷ್ಟು ಸ್ಥಾನ ಕೊಟ್ಟು ಕಮಲಪತ್ರ ಪುರಸ್ಕಾರ ನೀಡಿ ಗೌರವಿಸಿದೆ. ಅದಕ್ಕೆ ನಾನು ಯಾವತ್ತೂ ಚಿರಋಣಿ ಆಗಿರುತ್ತೇನೆ.ಜೇಸಿ ಎಂದರೆ ಒಂದು ಕುಟುಂಬವಿದ್ದಂತೆ.” ಎಂದು ಅವರು ಹೇಳಿದರು.

ಮುಳಬಾಗಿಲು ಕೂತಾಂಡ್ಲಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಚಲಪತಿ ಕೆ.ವಿ ರವರು ಸನ್ಮಾನ ಸ್ವೀಕರಿಸಿ ಮಾತನಾಡಿ “ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪೂರಕವಾದ ಶೈಕ್ಷಣಿಕ
ತರಬೇತಿ, ಕಾರ್ಯಕ್ರಮಗಳನ್ನು ಪಂಜ ಜೇಸಿ ನೀಡಿದೆ. ಇದರ ಪರಿಣಾಮವಾಗಿ ನಮ್ಮ ಶಾಲೆಯಲ್ಲಿ
ಉತ್ತಮ ಫಲಿತಾಂಶ ಬರುತ್ತಿದೆ”.
ಎಂದು ಅವರು ಹೇಳಿದರು.

ಘಟಕದ ನಿಕಟ ಪೂರ್ವಾಧ್ಯಕ್ಷ ಶಿವಪ್ರಸಾದ್ ಹಾಲೆಮಜಲು , ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ , ಕಾರ್ಯದರ್ಶಿ ವಾಚಣ್ಣ ಕೆರೆಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಜತ ರಥ ಸ್ಮರಣ ಸಂಚಿಕೆಯನ್ನು ಅತಿಥಿಗಳು ಬಿಡುಗಡೆ ಗೊಳಿಸಿದರು.
ರಜತ ರಥ ಸಂಪಾದಕ ಸವಿತಾರ ಮುಡೂರು ಉಪಸ್ಥಿತರಿದ್ದರು. ಇದೇ ವೇಳೆ ವಲಯಾಧ್ಯಕ್ಷ ಪುರುಷೋತ್ತಮ್ ಶೆಟ್ಟಿ ರವನ್ನು ಸನ್ಮಾನಿಸಲಾಯಿತು.
ಪಂಚಶ್ರೀ ವಿದ್ಯಾನಿಧಿ ವಿತರಣೆ :
ಜೇಸಿಐ ಪಂಜ ಪಂಚಶ್ರೀ ವತಿಯಿಂದ
ಪ್ರತಿ ವರ್ಷ ಪಂಚಶ್ರೀ ವಿದ್ಯಾನಿಧಿ ನೀಡಲಾಗುತ್ತದೆ. ಈ ವರುಷ ಆಯ್ಕೆಯಾದ ವಿದ್ಯಾರ್ಥಿಗಳಾದ
ಪ್ರದೀಪ್ ಕೆ ಕಟ್ಟ ಬಳ್ಪ, ಯಶ್ವಿತಾ ಅಡ್ಕ ಪಂಜ, ಖುಷಿ ಹಾಲೆಮಜಲು ವಿದ್ಯಾನಿಧಿ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಸುದರ್ಶನ್ ಪಟ್ಟಾಜೆ ವೇದಿಕೆಗೆ ಆಹ್ವಾನಿಸಿದರು.
ಗಗನ್ ಕಿನ್ನಿಕುಮೇರಿ ಜೇಸಿವಾಣಿ ನುಡಿದರು. ಲೋಕೇಶ್ ಆಕ್ರಿಕಟ್ಟೆ ಸ್ವಾಗತಿಸಿದರು.ಪ್ರವೀಣ್ ಕಾಯರ ಪ್ರಾಸ್ತಾವಿಕಗೈದರು. ಅಶ್ವಥ್ ಬಾಬ್ಲುಬೆಟ್ಟು, ಪ್ರವೀಣ್ ಕುಂಜತ್ತಾಡಿ, ಪ್ರಕಾಶ್ ಅಳ್ಪೆ, ಜೀವನ್ ಶೆಟ್ಟಿಗೆದ್ದೆ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ವಾಚಣ್ಣ ಕೆರೆಮೂಲೆ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಗಳೂರು -ಚಿಲಿಂಬಿ ಊರ್ವ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಆಶ್ರಿತ ಸಾಯಿ ಬಳಗ ದವರಿಂದ ಬೊಳ್ಳಿಮಲೆತ ಶಿವಶಕ್ತಿಲು ಎಂಬ ಪೌರಾಣಿಕ ತುಳು ನಾಟಕ ಪ್ರದರ್ಶನ ನಡೆಯಿತು.