ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ರಥ ಬೀದಿಯ ತಾಲ್ಲೂಕು ಕಚೇರಿಗೆ ತೆರಳುವ ರೋಟರಿ ಶಾಲೆಯಿಂದ ಎ.ಪಿ. ಎಂ.ಸಿ. ಯ ಮಧ್ಯಭಾಗದಲ್ಲಿ ರಸ್ತೆಯ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕೆಂದು ನ.ಪಂ. ಸದಸ್ಯ ರಿಯಾಜ್ ಕಟ್ಟೆಕಾರ್ ಆಡಳಿತಾಧಿಕಾರಿ ಗಳಿಗೆ ಮನವಿ ಮಾಡಿದ್ದಾರೆ.
ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ರಥ ಬೀದಿ ಹಾಗೂ ತಾಲ್ಲೂಕು ಕಚೇರಿಯಲ್ಲಿ ಶ್ರೀ ಚೆನ್ನಕೇಶವ ದೇವಸ್ಥಾನ, ಎ.ಪಿ.ಎಂ.ಸಿ ಕಚೇರಿ, ಜನ ಔಷದಿ ಕೇಂದ್ರ, ಜನ ಔಷದಿ ಕೇಂದ್ರ, ವಾಣಿಜ್ಯ ಸಂಕಿರ್ಣದ ವ್ಯಾಪಾರಸ್ಥರು, ಬೀದಿ ಬದಿ ವ್ಯಾಪಾರಸ್ಥರು,ಅಧಿಕ ಇದ್ದುಸಾರ್ವಜನಿಕ ಇವರಿಗೆ ಶೌಚಾಲಯ ಇಲ್ಲದೆ ತುಂಬಾ ತೊಂದರೆ ಯಾಗುತಿದ್ದು, ರಸ್ತೆ ಬದಿಯೇ, ಮೂತ್ರ ವಿಸರ್ಜನೆ ಮಾಡುತ್ತಿದ್ದು, ಆ ಸ್ಥಳದಲ್ಲಿ ಗಬ್ಬು ವಾಸನೆ ಬರುತಿರುವುದು “ಸ್ವಚ್ಛ ಭಾರತ್” ಅಬಿಯಾನಕ್ಕೆ ಕಪ್ಪುಚುಕ್ಕೆಯಾಗಿರುತ್ತದೆ. ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಬೇಕು ಅನ್ನುವ ಕೂಗು ಈ ಭಾಗದ ಜನರ ಹಲವಾರು ವರ್ಷದ ಬೇಡಿಕೆಯಾಗಿದ್ದೂ, ಈ ಬಗ್ಗೆ ನಾನು ಹಲವು ಭಾರಿ ನಗರ ಪಂಚಾಯತ್ ಮತ್ತು ಅಧಿಕಾರಿ ಗಳಿಗೆ ಮನವಿ ಮಾಡಿರುತ್ತಾರೆ.
ಆದುದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ,ಪಂಚಾಯತ್ ವತಿಯಿಂದ ಅಥವಾ ಸಂಘ ಸಂಸ್ಥೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು, ವ್ಯವಸ್ಥಿತ ರೀತಿಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿದಲ್ಲಿ ಜಾತ್ರಾ ಸಮಯದಲ್ಲೂ ಸಹ ಸಾರ್ವಜನಿಕರಿಗೆ, ಹಾಗೂ ಜಾತ್ರಾ ಸಮಯದಲ್ಲಿ ಇರುವ ಅಂಗಡಿಯವರಿಗೆ, ಅತೀ ಹೆಚ್ಚು ಅಗತ್ಯ ಇದ್ದೂ, ಈ ಭಾಗದ ಪ್ರಮುಖ ಬೇಡಿಕೆಯನ್ನು ಅತೀ ಶೀಘ್ರದಲ್ಲಿ ಪರಿಹರಿಸಿಕೊಡಬೇಕಾಗಿ ಅವರುಮನವಿ ಮಾಡಿಕೊಂಡಿದ್ದಾರೆ.