ಅಮರಮುಡ್ನೂರು ಪಂಚಾಯತ್ ನಲ್ಲಿ ಗೃಹಲಕ್ಷ್ಮೀ ಯೋಜನೆಯ ಅರ್ಜಿ ಪರಿಶೀಲನೆಯ ಕ್ಯಾಂಪ್

0

ಅಮರಮುಡ್ನೂರು ಗ್ರಾಮ ಪಂಚಾಯತ್ ನಲ್ಲಿ ರಾಜ್ಯ ಸರಕಾದ ಗ್ಯಾರಂಟಿ ಯೋಜನೆಯ ಗೃಹಲಕ್ಷ್ಮೀ ಯೋಜನೆಯಿಂದ ಅನರ್ಹ ಗೊಂಡಿರುವ ಫಲಾನುಭವಿಗಳ ದಾಖಲೆ ಪತ್ರ ಪರಿಶೀಲನಾ ಶಿಬಿರವು ಡಿ.27 ರಂದು ನಡೆಯಿತು.

ಅರ್ಹ ಫಲಾನುಭವಿಗಳ ಖಾತೆಗೆ ನಗದು ಜಮೆಯಾಗದಿರುವ ಕುರಿತು ಪರಿಶೀಲಿಸಿ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ, ಹೊಸ ಬ್ಯಾಂಕ್ ಖಾತೆ ಹಾಗೂ ಆಧಾರ್ ಜೋಡಣೆ ಮತ್ತು ಇ.ಕೆವೈಸಿ ನವೀಕರಣ ಹಾಗೂ ಗೃಹಲಕ್ಷ್ಮೀ ಅರ್ಜಿ ಸ್ಥಿತಿ ಪರಿಶೀಲಿಸಿ ನ್ಯೂನ್ಯತೆಗಳನ್ನು ಸರಿಪಡಿಸುವ ಕಾರ್ಯವು ಡಿ.27 ರಂದು 29 ರ ತನಕ ನಡೆಯಲಿರುವುದು.
ಸ್ಥಳೀಯ ಎರಡು ಗ್ರಾಮಗಳ ಸುಮಾರು 9 ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು ಹಾಗೂ ಪಂಚಾಯತ್ ಸಿಬ್ಬಂದಿ ವರ್ಗದವರು ಸಹಕರಿಸುತ್ತಿದ್ದಾರೆ.