ಪಡ್ಪಿನಂಗಡಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಚುನಾವಣೆ

0

ಪಡ್ಪಿನಂಗಡಿ ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರುಗಳ ಆಯ್ಕೆಗೆ ಚುನಾವಣೆಗೆ 13 ಸ್ಥಾನವಿದ್ದು. ಕೇವಲ 12 ನಾಮಪತ್ರ ಸಲ್ಲಿಕೆಯಾಗಿದ್ದು ಮತದಾನ ನಡೆಯದೆ ಅವಿರೋಧ ಆಯ್ಕೆಯಾಗಿದೆ.

ಇಲ್ಲಿ ಒಟ್ಟು 13 ಮಂದಿ ನಿರ್ದೇಶಕರುಗಳ ಆಯ್ಕೆಯಾಗ ಬೇಕಿತ್ತು.ಪ.ಜಾತಿ ಮೀಸಲು ಸ್ಥಾನಕ್ಕೆ ಅರ್ಹ ಸದಸ್ಯರಿಲ್ಲದೆ ನಾಮಪತ್ರ ಸಲ್ಲಿಕೆ ಆಗಿಲ್ಲ.

ಸಾಮಾನ್ಯ ಸ್ಥಾನದಿಂದ ಕಾರ್ಯಪ್ಪ ಗೌಡ ಆಕ್ರಿಕಟ್ಟೆ, ಲಕ್ಷ್ಮೀನಾರಾಯಣ ನಡ್ಕ, ಲಕ್ಷ್ಮಣ ಗೌಡ ಆಕ್ರಿಕಟ್ಟೆ, ಬೆಳ್ಯಪ್ಪ ಗೌಡ ದೇರೆಟ್ಟಿ, ರಾಮಚಂದ್ರ ರೈ ಕಲ್ಲೇರಿ, ವಾಸುದೇವ ಗೌಡ ಅಲೆಂಗಾರ, ಸತೀಶ್ ಮೇಲ್ಪಾಡಿ,ಪ.ಪಂಗಡ ಮೀಸಲು ಸ್ಥಾನಕ್ಕೆ ನಾರಾಯಣ ಪುಚ್ಚಮ, ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಸ್ಥಾನಕ್ಕೆ ಶಿವರಾಮ ಚಾಮೆತ್ತಡ್ಕ, ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಸ್ಥಾನಕ್ಕೆ ಬಾಲಕೃಷ್ಣ ಗೌಡ ಕುಳ್ಸಿಗೆ, ಮಹಿಳಾ ಮೀಸಲು ಸ್ಥಾನಕ್ಕೆ ಶ್ರೀಮತಿ ಭವಾನಿ ಆಕ್ರಿಕಟ್ಟೆ, ಶ್ರೀಮತಿ ನಂದಿನಿ ಆಕ್ರಿಕಟ್ಟೆ ರವರು ನಾಮಪತ್ರ ಸಲ್ಲಿಸಿದ್ದು ಈ ಎಲ್ಲಾ ಸ್ಥಾನಗಳಿಗೆ ಪ್ರತಿ ಸ್ಪರ್ಧಿಗಳು ಇಲ್ಲದಿರುವುದರಿಂದ ಅವಿರೋಧ ಆಯ್ಕೆಯಾಗಿದ್ದಾರೆ.

ಡಿ.26ರಂದು ನಾಮಪತ್ರಗಳ ಪರಿಶೀಲನೆ ನಡೆಯಿತು.ಅಂದೇ ರಿಟರ್ನಿಂಗ್ ಅಧಿಕಾರಿಯವರಿಂದ ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಂಡಿತ್ತು.ಡಿ.27 ಅಭ್ಯರ್ಥಿಗಳಿಗೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಯಾವುದೇ ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯದೆ ಮತ್ತು ಸ್ಪರ್ಧಿಗಳು ಇಲ್ಲದಿರುವುದರಿಂದ ಮತದಾನ ನಡೆಯದೆ ಅವಿರೋಧ ಆಯ್ಕೆಯಾಗಿದ್ದಾರೆ. ರಿಟರ್ನಿಂಗ್ ಅಧಿಕಾರಿಯಾಗಿ ಶಿವಲಿಂಗಯ್ಯ ಎಂ ಕರ್ತವ್ಯ ನಿರ್ವಹಿಸಿದರು. ಸಂಘದ ಕಾರ್ಯದರ್ಶಿ ಶ್ರೀಮತಿ ತೀರ್ಥಾ ಡಿ ಸಹಕರಿಸಿದರು.