ಅಮರಪಡ್ನೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವು ಡಿ.26 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕಿ ಕು .ಭಾಗೀರಥಿ ಮುರುಳ್ಯ ವಹಿಸಿದರು. ಅಮರಮುಡ್ನೂರು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಜಾನಕಿ ಕಂದಡ್ಕ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಸುಳ್ಯ ಕೆ.ವಿ.ಜಿ ಪಾಲಿಟೆಕ್ನಿಕ್ ಕಾಲೇಜು ನಿವೃತ್ತ ಪಾಂಶುಪಾಲರಾದ ಬಾಲಕೃಷ್ಣ ಬೊಳ್ಳೂರು ಮುಖ್ಯ ಭಾಷಣ ಮಾಡಿದರು.
ಮುಖ್ಯ ಅತಿಥಿಗಳಾಗಿ ಅಮರಮುಡ್ನೂರು ಗ್ರಾ.ಪಂ ಉಪಾಧ್ಯಕ್ಷೆ ಶ್ರೀಮತಿ ಭುವನೇಶ್ವರಿ, ಅಮರಮುಡ್ನೂರು ಗ್ರಾ.ಪಂ ಸದಸ್ಯರುಗಳಾದ ರಾಧಾಕೃಷ್ಣ ಕೊರತ್ಯಡ್ಕ, ಜನಾರ್ದನ ಪೈಲೂರು, ಸುಳ್ಯ ನಿವೃತ್ತ ಕ್ಷೇತ್ರ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಮೀನಾಕ್ಷಿ ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಒ.,ನಿವೃತ್ತ ಆಫೀಸ್ ಸುಪರಿಟೆಂಡೆಂಟ್ ಸುಳ್ಯ ಭಾರತೀಯ ಸಂಚಾರ ನಿಗಮ, ಜಿ. ಗೋಪಾಲಕೃಷ್ಣ ಭಟ್,ಕುಕ್ಕುಜಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ಕೇಶವ ಗೌಡ ಕರ್ಮಜೆ,ನಿವೃತ್ತ ಮುಖ್ಯೋಪಾಧ್ಯಾಯರಾದ ಬಟ್ಯಪ್ಪ ನಾಯ್ಕ , ಅಮರಪಡ್ನೂರು ಶಾಲಾ ನಿವೃತ್ತ ಶಿಕ್ಷಕಿ ಶ್ರೀಮತಿ ಶ್ರೀಮತಿ ನೀಲಮ್ಮ ಪಿ, ಕ.ರಾ.ಸುಳ್ಯ ಪ್ರಾ.ಶಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ ಗೌಡ ಕೆ., ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಈಶ್ವರ ಗೌಡ ಕಾಯರ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ರೂಪವಾಣಿ ಬಿ., ಹಿರಿಯ ವಿದ್ಯಾಾರ್ಥಿ ಸಂಘದ ಅಧ್ಯಕ್ಷ ನಿತಿನ್ ಪಿ , ಶಾಲಾ ವಿದ್ಯಾರ್ಥಿ ನಾಯಕಿ ಕು .ಧೃತಿ ಪಿ.ಎಸ್ ಉಪಸ್ಥಿತರಿದ್ದರು.
ಈಶ್ವರ ಕಾಯಾರ ಸ್ವಾಗತಿಸಿ, ಶಿಕ್ಷಕ ಶಿವ ಪ್ರಸಾದ್ ಕಾರ್ಯಕ್ರಮದ ವಂದಿಸಿ, ಮುರಳಿ ನಳಿಯಾರು,ನವೀನ ಬಾಂಜಿಕೋಡಿ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಹಾಡು,ನೃತ್ಯ,ಕಿರು ನಾಟಕ,ಯಕ್ಷಗಾನ ನಡೆಯಿತು.ಚೊಕ್ಕಾಡಿ ಮಯೂರಿ ಯುವತಿ ಮಂಡಲದವರಿಂದ ಕಿರು ನಾಟಕ ಪ್ರದರ್ಶನ ನಡೆಯಿತು.