ಪುತ್ತೂರು ಉಪವಿಭಾಗದ ನೂತನ ಸಹಾಯಕ ಕಮೀಷನರ್ ಆಗಿ ಜುಬಿನ್ ಮೊಹಾಪಾತ್ರ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಬುಧವಾರ ಸುಳ್ಯಕ್ಕೆ ಆಗಮಿಸಿದ್ದಾರೆ.
ಶಾಸಕಿ ಭಾಗೀರಥಿ ಮುರುಳ್ಯ ಅವರು ಹೂಗುಚ್ಚ ನೀಡಿ ಸ್ವಾಗತಿಸಿದರು.
ಒಡಿಸ್ಸಾ ಮೂಲದವರಾದ ಬೆಂಗಳೂರಿನಲ್ಲಿ ನೆಲೆಸಿರುವ ಜುಬಿನ್ ಮಹಾಪಾತ್ರ 2021 ರ ಐಎಎಸ್ ಬ್ಯಾಚ್ನ ಅಧಿಕಾರಿ ಐಐಟಿ ರೂರ್ಕೇಲಾದಲ್ಲಿ ವ್ಯಾಸಂಗ ಮಡಿದ್ದರು. 2019ರಲ್ಲಿ ಐಪಿಎಸ್ ಉತ್ತೀರ್ಣರಾಗಿ ದೆಹಲಿಯಲ್ಲಿ ಐಪಿಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. 2021ರಲ್ಲಿ 46ನೇ ರಾಂಕ್ ನೊಂದಿಗೆ ಐಎಎಸ್ ಉತ್ತೀರ್ಣರಾಗಿ ಕಾರವಾರ ಮತ್ತು ಶಿರಸಿಯಲ್ಲಿ ಪ್ರೊಬೇಷನರಿ ಮುಗಿಸಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾಗಿ ಪ್ರಥಮ ನೇಮಕವಾಗಿದ್ದಾರೆ. ಸುಳ್ಯ ತಾಲೂಕು ಕಚೇರಿಯಲ್ಲಿ ಸ್ವಾಗತ ನೀಡಲಾಯಿತು.