ಗಾಂಧಿನಗರ ಕೆ.ಪಿ.ಎಸ್.ನಲ್ಲಿ ‌ವಾರ್ಷಿಕೋತ್ಸವ-ರಂಗಮಂದಿರ ಉದ್ಘಾಟನೆ

0

ನಿವೃತ್ತ ಶಿಕ್ಷಕಿ ಶ್ರೀಮತಿ ಎ.ಜಿ. ಭವಾನಿಯವರಿಗೆ ಬೀಳ್ಕೊಡುಗೆ

ಸ್ವಾವಲಂಬಿ ಜೀವನಕ್ಕೆ ಶಿಕ್ಷಣ ಅಗತ್ಯ : ಶಾಸಕಿ ಭಾಗೀರಥಿ ಮುರುಳ್ಯ

ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಣ ಮಗುವಿನ ಭವಿಷ್ಯಕ್ಕೆ ಅಡಿಪಾಯ‌ ಇದ್ದಂತೆ. ಇದರಿಂದ ಯಾರೂ ವಂಚಿತರಾಗದಂತೆ‌ ಎಲ್ಲರೂ‌ ನೋಡಿಕೊಳ್ಳಬೇಕು. ಮಗು ಸ್ವಾವಲಂಬಿ ‌ಜೀವನ ನಡೆಸಲು ಶಿಕ್ಷಣ ಅಗತ್ಯ ಎಂದು ಶಾಸಕಿ ಕು.ಭಾಗೀರಥಿ ‌ಮುರುಳ್ಯ‌ ಹೇಳಿದರು.

ಜ.1 ರಂದು ಸುಳ್ಯದ ಗಾಂಧಿನಗರ ‌ಕೆಪಿಎಸ್. ವಿದ್ಯಾಸಂಸ್ಥೆಯ‌ ವಾರ್ಷಿಕೊತ್ಸವ ಹಾಗೂ‌ ನೂತನ ರಂಗಮಂದಿರದ ಉದ್ಘಾಟನೆ ಹಾಗೂ ನಿವೃತ್ತ ಶಿಕ್ಷಕಿ ಶ್ರೀಮತಿ ಎ.ಜಿ.ಭವಾನಿ ಯವರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು‌ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಕಾರ್ಯಾಧ್ಯಕ್ಷ ಚಿದಾನಂದ ಕುದ್ಪಾಜೆ ವಹಿಸಿದ್ದರು.

ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಮತಿ ಭವಾನಿ ಎ.ಜಿ.ಯವರನ್ನು ಶಾಸಕಿ ಭಾಗೀರಥಿ‌ ಮುರುಳ್ಯ ಹಾಗೂ ಗಣ್ಯರು ಸನ್ಮಾನಿಸಿದರು. ನಿವೃತ್ತರಾದ ಶಿಕ್ಷಕಿ ಭವಾನಿಯವರು ರೂ.50,001 ನ್ನು ದೇಣಿಗೆಯನ್ನು‌ ನೀಡಿದರು.

ಬಳಿಕ ಮಲ್ನಾಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಂಸ್ಥೆಯ ಅಧ್ಯಕ್ಷ ರಿಯಾಜ್ ಕಟ್ಟೆಕಾರ್ ಶ್ರೀಮತಿ ಭವಾನಿಯವರನ್ನು ಸನ್ಮಾನಿಸಿದರು.

ಸುಳ್ಯ‌ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಇ.ರಮೇಶ್, ಸುಳ್ಯ‌ ನ.ಪಂ. ಮಾಜಿ ಅಧ್ಯಕ್ಷರುಗಳಾದ ಎಂ.ವೆಂಕಪ್ಪ ಗೌಡ, ಎನ್.ಎ.ರಾಮಚಂದ್ರ, ಜಿ.ಪಂ. ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹಮ್ಮದ್ ರಿಯಾಜ್, ಕ್ಷೇತ್ರ ಸಮನ್ವಯಾಧಿಕಾರಿ ಶ್ರೀಮತಿ ಶೀತಲ್ ಯು.ಕೆ., ಎಂ.ಬಿ.ಫೌಂಡೇಶನ್ ಅಧ್ಯಕ್ಷ ಎಂ.ಬಿ.ಸದಾಶಿವ, ಶಿಕ್ಷಣ ಸಂಯೋಜಕರಾದ ಶ್ರೀಮತಿ ನಳಿನಿ, ಶ್ರೀಮತಿ ಸಂಧ್ಯಾಕುಮಾರಿ, ಕಾಲೇಜಿನ ಉಪಪ್ರಾಂಶುಪಾಲೆ ಜ್ಯೋತಿ, ಪ್ರಾಥಮಿಕ ಶಾಲಾ‌ ಮುಖ್ಯ ಶಿಕ್ಷಕ ಪದ್ಮನಾಭ ಅತ್ಯಾಡಿ ವೇದಿಕೆಯಲ್ಲಿ ಇದ್ದರು.

ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಸಮದ್ ಸ್ವಾಗತಿಸಿದರು. ಉಪಪ್ರಾಂಶುಪಾಲೆ‌ ಶ್ರೀಮತಿ ಜ್ಯೋತಿ ವರದಿ‌ ಮಂಡಿಸಿದರು.
ಉಪನ್ಯಾಸಕ ರಾಜೇಶ್‌ ಹಾಗೂ ಶಿಕ್ಷಕ ಚಿನ್ನಪ್ಪ ಗೌಡ ಪತ್ತುಕುಂಜ ಕಾರ್ಯಕ್ರಮ ‌ನಿರೂಪಿಸಿದರು.