ಕೊಡಗು ಜಿ.ಪಂ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿ, ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಉದ್ಭವ್ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಬೆಂಗಳೂರು, ಆರೋಗ್ಯ ರಕ್ಷಾ ಸಮಿತಿ ಸಂಪಾಜೆ, ಬಾಲೆಂಬಿ, ಪೆರಾಜೆ, ಮದೆನಾಡು ಮತ್ತು ಸಾರ್ವಜನಿಕಕರಸಹಭಾಗಿತ್ವದೊಂದಿಗೆ ಆಯುಷ್ಮಾನ್ ಭವ: ಅಭಿಯಾನದ ಅಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಕೊ.ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಭಾಭವನದಲ್ಲಿ ಜ.2ರಂದು ಜರುಗಿತು.
ಕಾರ್ಯಕ್ರಮವನ್ನು ಕೊ.ಸಂಪಾಜೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ರಮಾದೇವಿ ಕಳಗಿ ಉದ್ಘಾಟಿಸಿದರು. ಕೊಡಗು ವೈಜ್ಞಾನಿಕ ವಿಜ್ಞಾನಗಳ ಮಹಾಸಂಸ್ಥೆಯ ಕ್ಲಿನಿಕಲ್ ಸೈಕಾಲಜಿ ರಮೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಉದ್ಬವ್ ಸಂಸ್ಥೆ ಅಧ್ಯಕ್ಷ ಶಿವಾನಂದ ಮೂರ್ತಿ, ಮಡಿಕೇರಿ ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಉಪಾಧ್ಯಾಯ ಚೆಂಬು, ಪೆರಾಜೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಚಂದ್ರಕಲಾ, ಸಂಪಾಜೆ ಲಯನ್ಸ್ ಕ್ಲಬ್ ಅಧ್ಯಕ್ಷ ಯೋಗೀಶ್, ಕೊಡಗು ವೈಜ್ಞಾನಿಕ ವಿಜ್ಞಾನ ಸಂಸ್ಥೆಯ ಸಹ ಪ್ರಾಧ್ಯಾಪಕ ಮಹೇಶ್,ವೈದ್ಯಾಧಿಕಾರಿ ಹರೀಶ್ ಗೌಡ ಉಪಸ್ಥಿತರಿದ್ದರು. ಸಂಪಾಜೆ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.