ಎಸ್ ಎಸ್ ಎಫ್ ಸುಳ್ಯ ಡಿವಿಝನ್ ಮಟ್ಟದ ಸಾಹಿತ್ಯೋತ್ಸವ

0

ಎಸ್ ಎಸ್ ಎಫ್ ವತಿಯಿಂದ ಸುಳ್ಯ ಡಿವಿಷನ್ ಮಟ್ಟದ ಎಸ್ ಎಸ್ ಎಫ್ ಸುಳ್ಯ ಸಾಹಿತ್ಯೋತ್ಸವ ಡಿಸೆಂಬರ್ 31 ರಂದು ಬೆಳ್ಳಾರೆ ತಂಬಿನಮಕ್ಕಿ ದಾರುಲ್ ಹುದಾ ಶಿಕ್ಷಣ ಸಂಸ್ಥೆಯ ವಠಾರದಲ್ಲಿ ನಡೆಯಿತು.

ಸಾಹಿತ್ಯೋತ್ಸವ ಸ್ಪರ್ಧೆಯಲ್ಲಿ ಸುಳ್ಯದ 26 ಶಾಖೆಗಳಿಂದ 4 ಸೆಕ್ಟರ್ಗಳ 300ಕ್ಕೂ ಹೆಚ್ಚು ಪ್ರತಿಭೆಗಳು ಭಾಗವಹಿಸಲಿದ್ದು ಐದು ವಿಭಾಗಗಳಲ್ಲಿ 118 ಸ್ಪರ್ಧೆಗಳು ನಡೆದು ಅಂತಿಮವಾಗಿ ಸುಳ್ಯ ಸೆಕ್ಟರ್ 1097 ಅಂಕ ಪಡೆದು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡರೆ ಅಜ್ಜಾವರ ಸೆಕ್ಟರ್ 1045 ಅಂಕದೊಂದಿಗೆ ರನ್ನರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿತು. 945 ಅಂಕದೊಂದಿಗೆ ಜಾಲ್ಸೂರು ಸೆಕ್ಟರ್ ಮೂರನೇ ಸ್ಥಾನ ಪಡೆದುಕೊಂಡರೆ, 928 ಅಂಕದೊಂದಿಗೆ ಬೆಳ್ಳಾರೆ ನಾಲ್ಕನೇ ಸ್ಥಾನವನ್ನು ತಮ್ಮದಾಗಿಸಿಕೊಂಡಿತು.

ಡಿಸೆಂಬರ್ 31ರಂದು ಬೆಳಿಗ್ಗೆ ಬೆಳ್ಳಾರೆ ದರ್ಗಾ ಶರೀಫಿನಲ್ಲಿ ಪ್ರಾರ್ಥನೆ ನೆರವೇರಿಸಿ ಬಳಿಕ ದಾರುಲ್ ಹುದಾ ತಂಬಿನಮಕ್ಕಿ ವಿದ್ಯಾಸಂಸ್ಥೆಯಲ್ಲಿ ಬೆಳಿಗ್ಗೆ ಧ್ವಜಾರೋಹಣವನ್ನು ಸ್ಥಳೀಯ ಸಂಸ್ಥೆಯ ಮ್ಯಾನೇಜರ್ ಖಲೀಲ್ ಹಿಮಮಿ ನೆರವೇರಿದರು.ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಇದರ ಅಬುದಾಬಿ ಝೋನಲ್ ಅಧ್ಯಕ್ಷ ಹಸೈನಾರ್ ಅಮಾನಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ರಾತ್ರಿ ಒಂಬತ್ತು ಗಂಟೆಯವರೆಗೆ ಜಿದ್ದಾಜಿದ್ದಿನಿಂದ ನಡೆದ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದ ವೇದಿಕೆಯಲ್ಲಿ ಎಸ್ ಎಸ್ ಎಫ್,ಎಸ್ ವೈ ಎಸ್, ಕೆ ಎಂ ಜೆ, ಎಸ್ಎಂಎ, ಎಸ್ ಜೆ ಎಂ ಸೇರಿದಂತೆ ಇನ್ನಿತರ ಸಂಘಟನೆಗಳ ನಾಯಕರುಗಳು ಭಾಗವಹಿಸಿದ್ದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.

ಸಭಾ ವೇದಿಕೆಯಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ಸೆಂಟರ್ ಅಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ, ಗಾಂಧಿನಗರ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಸ್ತಫಾ ಜನತಾ, ಕೆಸಿಎಫ್ ಮುಖಂಡ ಹಸೈನಾರ್ ಅಮಾನಿ ಅಜ್ಜಾವರ, ಮುಖಂಡರುಗಳಾದ ಹಮೀದ್ ಸುಣ್ಣ ಮೂಲೆ, ವಕ್ಸ್ ಬೋರ್ಡ್ ದ ಕ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಮೊಗರ್ಪಣೆ, ಸಾಹಿತ್ಯೋತ್ಸವ ಸಮಿತಿಯ ಚೇರ್ಮನ್ ಅಬೂಬಕ್ಕರ್ ಸಿದ್ದೀಕ್ ಹಿಮಮಿ ಸಕಾಫಿ,ಮೀಡಿಯಾ ಕನ್ವೀನರ್ ಕಬೀರ್ ಹಿಮಮಿ ಸಕಾಫಿ,ಫೈನಾನ್ಸ್ ಸೆಕ್ರೆಟರಿ ಶರೀಫ್ ಜಯನಗರ, ಕನ್ವೀನರ್ ಸಿದ್ದಿಕ್ ಎಲಿಮಲೆ, ಮುಖಂಡರುಗಳಾದ ಅಬೂಬಕ್ಕರ್ ಸಿದ್ದೀಕ್ ಕಟ್ಟೆಕಾರ್ಸ್, ಸಮೀರ್ ಮೊಗರ್ಪಣೆ, ನೌಶಾದ್ ಕೆರೆಮೂಲೆ, ಎಸ್ ಎಮ್ ಎ ಮುಖಂಡರಾದ ಅಬ್ದುಲ್ ಲತೀಫ್ ಗೂನಡ್ಕ, ಅಬ್ದುಲ್ ಲತೀಫ್ ಹರ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು.

ಡಿವಿಷನ್ ಸಮಿತಿಯ ಸದಸ್ಯರು ಮತ್ತು ಪದಾಧಿಕಾರಿಗಳು ದಾರುಲ್ ಹುದಾ ತಂಬಿನಮಕ್ಕಿ ಅಧ್ಯಾಪಕ ವೃಂದದವರು,ದರ್ಸ್ ವಿದ್ಯಾರ್ಥಿಗಳು ಸಹಕರಿಸಿದರು.