ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ವಿಷ್ಣುನಗರದ
ಶ್ರೀ ವಿಷ್ಣುಮೂರ್ತಿ,
ಶ್ರೀ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ
ಶ್ರೀ ವಿಷ್ಣುಮೂರ್ತಿ, ರಕ್ತೇಶ್ವರಿ ಮತ್ತು ಪರಿವಾರ ದೈವಗಳ 70 ನೇ ವಾರ್ಷಿಕ ಉತ್ಸವವು ಕ್ಷೇತ್ರದ ಆಚಾರ್ಯರಾದ ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಪದ್ಮನಾಭ ತಂತ್ರಿಗಳ ನಿರ್ದೇಶನದಂತೆ ಜರುಗಿತು.
ಜ.3 ರಂದುಬೆಳಗ್ಗೆ
ಶ್ರೀ ವಿಷ್ಣುಮೂರ್ತಿ
ದೈವದ ಅಗ್ನಿಕುಂಡ
ಜೋಡಣೆಯ ಕಾರ್ಯವು ಭಾರತೀಯ ತೀಯ ಸಮಾಜ ಬಾಂಧವರು ನೆರವೇರಿಸಿದರು.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಂಗನವಾಡಿ ಮಕ್ಕಳಿಂದ ಚಿಣ್ಣರ ಹೆಜ್ಜೆ ,ಬಳಿಕ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಇಳಿದು ಬಳಿಕ ಮೇಲೇರಿಗೆ ಅಗ್ನಿಸ್ಪರ್ಶವಾಯಿತು.
ರಾತ್ರಿ ಸ್ಥಳೀಯ ಪ್ರತಿಭೆಗಳಿಂದ ನಾಟ್ಯ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ವಾಯಿತು. ಆಗಮಿಸಿದ ಭಕ್ತಾದಿಗಳಿಗೆ ರಾತ್ರಿ ಸಾರ್ವಜನಿಕ ಅನ್ನ ಸಂತರ್ಪಣೆಯು ನಡೆಯಿತು. ಬಳಿಕ
ಶ್ರೀ ವಿಷ್ಣುಮೂರ್ತಿ ದೈವದ ಕುಳ್ಚಾಟ ನರ್ತನ ಸೇವೆಯು ನಡೆಯಿತು. ಈ ಸಂದರ್ಭದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಶ್ರೀ ದೈವದ ಕುಳ್ಚಾಟವನ್ನು ಕಣ್ತುಂಬಿಕೊಂಡರು.
ನಂತರಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ
ಶ್ರೀಹರಿಲೀಲಾಮೃತಂ ಎಂಬ ಯಕ್ಷಗಾನ ಬಯಲಾಟವು
ಪ್ರದರ್ಶನವಾಯಿತು.