ಜಾಲ್ಸೂರು ಪೆಟ್ರೋಲ್ ಪಂಪ್ ನಲ್ಲಿ ಗ್ರಾಹಕನಿಂದ ಮೋಸ

0

210 ರೂ. ಪೆಟ್ರೋಲ್ ಹಾಕಲು ಹೇಳಿ 10 ರೂ. ಗೂಗಲ್ ಪೇ ಮಾಡಿ ಹೋದ ಗ್ರಾಹಕ

ಬೈಕಿಗೆ ಪೆಟ್ರೋಲ್ ಹಾಕಲು ಬಂದ ಗ್ರಾಹಕರೊಬ್ಬರು ಬೈಕಿಗೆ 210 ರೂಪಾಯಿ ಪೆಟ್ರೋಲ್ ಹಾಕಲು ಹೇಳಿ 10 ರೂ. ಗೂಗಲ್ ಪೇ ಮಾಡಿ 200 ರೂ. ಮೋಸ ಮಾಡಿದ ಘಟನೆ ಜಾಲ್ಸೂರಿನ ಭಾರತ್ ಪೆಟ್ರೋಲಿಯಂ ಪಂಪ್ ನಲ್ಲಿ ಜ.5ರಂದು ರಾತ್ರಿ ಸಂಭವಿಸಿದೆ.

ಬೈಕಿಗೆ ಪೆಟ್ರೋಲ್ ಹಾಕಲು ಬಂದ ವ್ಯಕ್ತಿಯೋರ್ವರು ಪಂಪ್ ಸಿಬ್ಬಂದಿಯಲ್ಲಿ 210 ರೂ. ಪೆಟ್ರೋಲ್ ಹಾಕಲು ಹೇಳಿದರೆನ್ನಲಾಗಿದೆ. ಪಂಪ್ ಸಿಬ್ಬಂದಿ 210 ರೂಪಾಯಿಯ ಪೆಟ್ರೋಲ್ ಹಾಕಿದಾಗ ಆ ವ್ಯಕ್ತಿ ತಾನು ಹಣವನ್ನು ಸ್ಕ್ಯಾನ್ ಮಾಡಿ ಗೂಗಲ್ ಪೇ ಮಾಡುವುದಾಗಿ ತಿಳಿಸಿದ ಮೇರೆಗೆ ಪಂಪ್ ಸಿಬ್ಬಂದಿ ಸ್ಕ್ಯಾನರ್ ತೋರಿಸಿದಾಗ ಆ ವ್ಯಕ್ತಿ 210 ರೂ. ನ ಬದಲು ಕೇವಲ 10 ರೂ. ಪೇ.ಮಾಡಿದ್ದು, ಆ ವ್ಯಕ್ತಿ ಹಣ ವರ್ಗಾವಣೆ ಮಾಡಿದ್ದು ಸಕ್ಸಸ್ ಎಂದು ಬಂದದ್ದನ್ನು ತನ್ನ ಮೊಬೈಲ್ ನಲ್ಲಿ ಪಂಪ್ ಸಿಬ್ಬಂದಿಗೆ ತೋರಿಸಿದಾಗ ಆತ ಹಣ ಬಂದಿರಬಹುದೆಂದು ಭಾವಿಸಿದರೆನ್ನಲಾಗಿದೆ. ಆದರೆ ಗೂಗಲ್ ಪೇ ಸ್ಪೀಕರ್ ಪೆಟ್ರೋಲ್ ಪಂಪ್ ನ ಕಛೇರಿಯ ಒಳಗಿದ್ದ ಕಾರಣ ಅದು ಸಿಬ್ಬಂದಿಗೆ ಕೇಳದೇ ಇದ್ದುದರಿಂದ ಪಂಪ್ ಸಿಬ್ಬಂದಿಗಳು ಮೋಸ ಹೋಗಬೇಕಾಯಿತು. ತಕ್ಷಣ ಪಂಪ್ ಸಿಬ್ಬಂದಿಗಳು ಕಾರ್ಯಪ್ರವೃತರಾದರಾದರೂ , ಆ ವ್ಯಕ್ತಿ ಮಾತ್ರ ಅಲ್ಲಿಂದ ತೆರಳಿದ್ದರೆನ್ನಲಾಗಿದೆ.