ಗೂನಡ್ಕ ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ “ಸಿರಿಧಾನ್ಯಗಳ ಆಹಾರ ಉತ್ಸವ 2024”

0

ಗೂನಡ್ಕದ ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಸಿರಿಧಾನ್ಯಗಳಿಂದ ವಿಭಿನ್ನ ರೀತಿಯ ಪೌಷ್ಟಿಕಾಂಶ, ಆರೋಗ್ಯಕರ ಮತ್ತು ರುಚಿಕರ ತಿಂಡಿಗಳನ್ನು ತಯಾರಿಸುವ ಮಾಹಿತಿಯನ್ನು ತಿಳಿಯಪಡಿಸುವ ಉದ್ದೇಶದಿಂದ ಸಿರಿಧಾನ್ಯಗಳ ಆಹಾರ ಉತ್ಸವವನ್ನು ಜ.೬ರಂದು ಏರ್ಪಡಿಸಲಾಯಿತು. ಉತ್ಸವದಲ್ಲಿ ಸುಮಾರು ೧೦೦ಕ್ಕೂ ಹೆಚ್ಚು ವಿಭಿನ್ನ ರೀತಿಯ ತಿಂಡಿಗಳನ್ನು ಶಾಲೆಯ ಮಕ್ಕಳು ಪ್ರದರ್ಶಿಸಿದರು . ಉತ್ಸವವನ್ನು ಸಂಸ್ಥೆಯ ನಿರ್ದೇಶಕಿ ಲೀಲಾವತಿ ರುಕ್ಮಯ್ಯ ದಾಸರು ಸವಿದು ಮಕ್ಕಳನ್ನು ಅಭಿನಂದಿಸುವ ಮೂಲಕ ಪ್ರೋತ್ಸಾಹಿಸಿದರು.ಈ ಉತ್ಸವದಲ್ಲಿ ಮಾತನಾಡಿದ ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಶೋಭಾಕಿಶೋರ್ ಅವರು ಇಂದಿನಿಂದ ಎಲ್ಲರೂ ತಮ್ಮ ದೈನಂದಿನ ಆಹಾರದಲ್ಲಿ ಹೆಚ್ಚು ಸಿರಿಧಾನ್ಯಗಳನ್ನು ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಲು ತಿಳಿಸಿದರು.ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಉಪಘಟಕಗಳ ವಿದ್ಯಾರ್ಥಿಗಳು, ಸಂಸ್ಥೆಯ ನಿರ್ದೇಶಕಿ ಲೀಲಾವತಿ ರುಕ್ಮಯ್ಯದಾಸ್, ಶಾಲಾ ಪ್ರಾಂಶುಪಾಲರಾದ ಶೋಭಾ ಕಿಶೋರ್, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.