ಅಯೋಧ್ಯೆಯ ರಾಮ ಮಂದಿರದ ಪ್ರತಿಷ್ಠಾ ಮಹೋತ್ಸವದ ಬ್ಯಾನರ್ ಹರಿದಪ್ರಕರಣ

0

ಕಿಡಿಗೇಡಿಗಳನ್ನು ಬಂಧಿಸದಿದ್ದಲ್ಲಿ
ರಸ್ತೆ ತಡೆ ಪ್ರತಿಭಟನೆಗೆ
ಹಿಂದೂ ಸಂಘಟನೆ ಮತ್ತು ಅಟೋ ಚಾಲಕರಿಂದ ನಿರ್ಧಾರ

ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿ ಮುಖ್ಯ ರಸ್ತೆ ಬದಿಯಲ್ಲಿ ಬಿ.ಎಂ.ಎಸ್ ಅಟೋ ಚಾಲಕರ ಸಂಘದ ವತಿಯಿಂದ ಅಳವಡಿಸಲಾದ ಅಯೋಧ್ಯೆಯ ಶ್ರೀ ರಾಮ ಮಂದಿರದ ಪ್ರತಿಷ್ಠಾ ಮಹೋತ್ಸವದ ಬ್ಯಾನರ್ ನ್ನು ಹರಿದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಕಿಡಿಗೇಡಿಗಳನ್ನು 24 ಗಂಟೆಯ ಒಳಗೆ ಬಂಧಿಸಿದಿದ್ದರೆ ನಾಳೆ ಬೆಳಗ್ಗೆ 10 ಗಂಟೆಯಿಂದ ಸುಳ್ಯದ ರಾಜ್ಯ ಹೆದ್ದಾರಿಯಲ್ಲಿ
ರಸ್ತೆ ತಡೆಯ ಮೂಲಕ ಪ್ರತಿಭಟಿಸುವುದಾಗಿ ಹಿಂದೂ ಪರ ಸಂಘಟನೆಯ ಸಭೆಯಲ್ಲಿ ಇಂದುನಿರ್ಧರಿಸಲಾಯಿತು.


ಜಿಲ್ಲಾ ಬಜರಂಗದಳ ಸಹ ಸಂಚಾಲಕ ಲತೀಶ್ ಗುಂಡ್ಯ ಮಾತನಾಡಿ
“ಹಿಂದೂ ಬಾಂಧವರ ಧಾರ್ಮಿಕ ಭಾವನೆಗೆ ದಕ್ಕೆ ಉಂಟು ಮಾಡುವ ಹೇಯಕೃತ್ಯವನ್ನು ಎಸಗಿದ ತಪ್ಪಿ ತಸ್ಥರನ್ನು ನಾಳೆ ಬೆಳಗ್ಗೆ 10 ಗಂಟೆಯ ಒಳಗಾಗಿ ಬಂಧಿಸದಿದ್ದರೆ ಸುಳ್ಯದಲ್ಲಿ ರಸ್ತೆ ತಡೆಯ ಮೂಲಕ ಪ್ರತಿಭಟನೆ ನಡೆಸುತ್ತೇವೆ. ಪ್ರತಿಭಟನೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು,
ಅಟೋ ಚಾಲಕರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ‌ ಮುಖಂಡ ವಿನಯಕುಮಾರ್ ಕಂದಡ್ಕ ” ಹಿಂದೂಗಳ ಮನಸ್ಸಿನ ಮೇಲೆ ಘಾಸಿ ಎಸಗಿ ರಾಮ ಮಂದಿರದ ಕಾರ್ಯದಲ್ಲಿ ಸಂತೋಷದಿಂದ ಭಾವಗವಹಿಸದಂತೆ ಅಶಾಂತಿ ಸೃಷ್ಟಿಸಲು ಷಡ್ಯಂತ್ರವಾಗಿರಲುಬಹುದು.ಇಂತಹ ಹೇಯ ಕೃತ್ಯವನ್ನು ಖಂಡಿಸುವುದಲ್ಲದೆ ತಕ್ಕ ಉತ್ತರವನ್ನು ಕಾರ್ಯ ರೂಪದಲ್ಲಿಮಾಡಿತೋರಿಸಬೇಕಾಗಿದೆ.ನಮ್ಮ ಬೇಡಿಕೆ ತಪ್ಪಿತಸ್ಥ ಹೇಡಿಗಳನ್ನು ತಕ್ಷಣ ಬಂಧಿಸಬೇಕು. ಕಾರ್ಯಕರ್ತರು ತಾಳ್ಮೆಯಿಂದ ಪ್ರತಿಭಟನೆಯಲ್ಲಿ ಭಾಗವಹಿಸಿ ಇಲಾಖೆಯ ಮೇಲೆ ಒತ್ತಡ ಹಾಕಬೇಕು. ಕಾನೂನು ಕೈಗೆತ್ತಿಕೊಳ್ಳದೆ ನಮ್ಮ ಕಡೆಯಿಂದ ಯಾವುದೇ ತಪ್ಪು ಆಗದಿರುವಂತೆ ಎಚ್ಚರಿಕೆ ವಹಿಸಬೇಕು‌ ಎಂದು ಅವರು ಕರೆ ನೀಡಿದರು.
ವಿ ಹೆಚ್.ಪಿ ಬಜರಂಗದಳ ಸುಳ್ಯ ಪ್ರಖಂಡದ ಅಧ್ಯಕ್ಷ ಸೋಮಶೇಖರ ಪೈಕ ಅಧ್ಯಕ್ಷತೆ ವಹಿಸಿದ್ದರು. ಬಜರಂಗದಳ ಸುಳ್ಯ
ನಗರ ಸಂಚಾಲಕ
ವರ್ಷಿತ್ ಚೊಕ್ಕಾಡಿ,
ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ನಿಕೇಶ್ ಉಬರಡ್ಕ,
ಡಾ.ಮನೋಜ್ ಕುಮಾರ್‌ ಅಡ್ಡಂತಡ್ಕ, ಚಿದಾನಂದ ವಿದ್ಯಾನಗರ, ಬಿ.ಎಂ.ಎಸ್.ಅಟೋ ಚಾಲಕರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು, ಹಿಂದೂ ಸಂಘಟನೆಯ ಪ್ರಮುಖರು ಮತ್ತು ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದರು.