ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಪ್ರೌಢಶಾಲಾ ವಿಭಾಗ ರಾಷ್ಟ್ರಮಟ್ಟದಲ್ಲಿ ವಿಶೇಷ ಸಾಧನೆ

0


ಒರಿಸ್ಸಾದ ಭುವನೇಶ್ವರದ RIE ಕ್ಯಾಂಪಸ್ಸಿನಲ್ಲಿ
NCERT ವತಿಯಿಂದ ಜನಸಂಖ್ಯಾ ಶಿಕ್ಷಣ ಯೋಜನೆಯ ಅಡಿಯಲ್ಲಿ ಪಾತ್ರಾಭಿನಯ ಹಾಗು ಜನಪದ ನೃತ್ಯ ಸ್ಪರ್ಧೆ ನಡೆಯಿತು . ಈ ಸ್ಪರ್ಧೆಗಳಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಅವಳಿ ಪ್ರಶಸ್ತಿಗಳನ್ನು ಪಡೆದು ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ವಿಶಿಷ್ಟ ಸಾಧನೆ ಮಾಡಿದೆ.

ಜನಪದ ನೃತ್ಯದಲ್ಲಿ ಪ್ಲಾಸ್ಟಿಕ್ ನ ಮರು ಬಳಕೆ ವಿಷಯದ ಬಗೆಗಿನ ಹಾಲಕ್ಕಿ ನೃತ್ಯದಲ್ಲಿ ಶ್ರೇಯ ಸಿ ಎಚ್, ಜೀವಿಕ ಬಿ, ಸಾನ್ವಿ ಬಿ ಎಸ್, ನಿಶಾ ಪಿ ಎಸ್, ವೈಷ್ಣವಿ ಪ್ರಕಾಶ್, ನಿಧಿ ಎ ಜೆ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ . ಮೊಬೈಲ್ ನ ಸದ್ಬಳಕೆ ಬಗೆಗಿನ ಇಂಗ್ಲಿಷ್ ಪಾತ್ರಾಭಿನಯದಲ್ಲಿ ರಾಷ್ಟ್ರ ಮಟ್ಟದಲ್ಲಿ ಸೃಜನಾದಿತ್ಯ ಶೀಲ ಕೆ, ಅಭಿಜ್ಞ ಎನ್, ಸಾಕ್ಷಿ ಪಿ ಆರ್, ಅನನ್ಯ ಕೆ ಎನ್, ಗಹನ ಎಸ್ ತೃತೀಯ ಬಹುಮಾನ ಪಡೆದಿರುತ್ತಾರೆ . ತಂಡದ ನಿರ್ದೇಶಕರಾದ ಹಾಗು ಮಾರ್ಗದರ್ಶಕರಾದ ಉಪ ಪ್ರಾಂಶುಪಾಲರಾದ ಶ್ರೀ ಪ್ರಕಾಶ ಮೂಡಿತ್ತಾಯ, ಶಿಕ್ಷಕರಾದ ಶ್ರೀಮತಿ ಲತಾ ವೆಂಕಟೇಶ್ ಪೈ, ಶ್ರೀಮತಿ ಮಮತಾ ಹಾಗೂ ನಾಗರಾಜ್ ಕುಲಾಲ್ ಪೆರ್ಲಂಪಾಡಿ ಭಾಗವಹಿಸಿದ್ದರು.