ಬೆಂಗಳೂರಿನ ವಾಣಿಜ್ಯ ನ್ಯಾಯಾಲಯ ಮತ್ತು ನ್ಯಾಯಾಂಗ ಅಕಾಡೆಮಿಯಲ್ಲಿ ಜಿಲ್ಲಾ ನ್ಯಾಯಾಧೀಶರಾಗಿದ್ದ ಚಂದ್ರಶೇಖರ್ ಉಪ್ಪಳಿಕೆ ಡಿ. 31 ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.
ಡಿ.15, 1963 ರಂದು ಏನೆಕಲ್ಲು ಗ್ರಾಮದ ಉಪ್ಪಳಿಕೆ ಗುಡ್ಡಪ್ಪ ಗೌಡ ಮತ್ತು ಶ್ರೀಮತಿ ಪರಮೇಶ್ವರಿರವರ ಪುತ್ರನಾಗಿ ಜನಿಸಿದ ಚಂದ್ರಶೇಖರ್ ರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ದೇವರಹಳ್ಳಿ ಶಾಲೆಯಲ್ಲಿ ಹಾಗೂ ಪ್ರೌಢ ಶಿಕ್ಷಣ, ಪದವಿ ಪೂರ್ವ ಶಿಕ್ಷಣವನ್ನು ಶ್ರೀ ಕುಕ್ಕೆ ಸುಬ್ರಹ್ಮಣ್ಯದ ಎಸ್ ಎಸ್ ಪಿ ಯು ಕಾಲೇಜಿನಲ್ಲಿ ಪಡೆದರು.
ಬಿಎಸ್ಸಿ ಪದವಿಯನ್ನು ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜು ಹಾಗೂ ಕಾನೂನು ಪದವಿಯನ್ನು ಉಡುಪಿಯ ಶ್ರೀ ವೈಕುಂಟ ಬಾಳಿಗ ಕಾಲೇಜಿನಲ್ಲಿ 1988ರಲ್ಲಿ ಮುಗಿಸಿದ ಇವರು ೨ ಚಿನ್ನದ ಪದಕ ಹಾಗೂ ನಗದು ಬಹುಮಾನವೂ ಲಭಿಸಿದೆ.
ಕರ್ನಾಟಕದ ಹೈಕೋಟ್ ನ ಮಾಜಿ ನ್ಯಾಯಧೀಶರಾಗಿರುವ ಜಸ್ಟೀಸ್ ಬಾಲಕೃಷ್ಣರವರಿಂದ ಚಿನ್ನದ ಪದಕಗಳನ್ನು ಇವರು ಸ್ವೀಕರಿಸಿದ್ದಾರೆ.
ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದಿಂದ ವ್ಯವಹಾರ ಕಾನೂನಿನಲ್ಲಿ ಎಲ್ಎಲ್ಎಂ ಪದವಿಯನ್ನು ಪಡೆದರು. ಹಿರಿಯ ವಕೀಲರಾದ ಎಂ ದಾಮೋದರ್ ಅವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ತಮ್ಮ ಅಭ್ಯಾಸವನ್ನು ಪ್ರಾರಂಭಿಸಿದರು. 1994 ರಲ್ಲಿ ಇವರು ತಮ್ಮ ಸ್ವತಂತ್ರ ಅಭ್ಯಾಸವನ್ನು ಸುಳ್ಯದಲ್ಲಿ ಪ್ರಾರಂಭಿಸಿದ ಬಳಿಕ ಇವರು ಸಿವಿಲ್ ನ್ಯಾಯಧೀಶರಾಗಿ 1999 ರಲ್ಲಿ ನೇಮಕಗೊಂಡು ತಿಪಟೂರು, ಕುಂದಾಪುರ, ಬಳ್ಳಾರಿ, ಕಾದೂರ್, ಬೆಂಗಳೂರು, ಉಡುಪಿ ಯಲ್ಲಿ ಕಾರ್ಯನಿರ್ವಹಿಸಿರುತ್ತಾರೆ.
ಸೀನಿಯರ್ ಜಡ್ಜ್ ಆಗಿ 2014ರಲ್ಲಿ ಭಡ್ತಿಗೊಂಡು ಬಂಟ್ವಾಳ , ಡಿ.ಆರ್.ಟಿ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
ಜಿಲ್ಲಾ ನ್ಯಾಯಾಧೀಶರಾಗಿ ಬಡ್ತಿ ಪಡೆದ ಇವರು ಬೆಂಗಳೂರಿನ ವಾಣಿಜ್ಯ ನ್ಯಾಯಾಲಯ ಮತ್ತು ನ್ಯಾಯಾಂಗ ಅಕಾಡೆಮಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
ಇವರು ಪತ್ನಿ ಶ್ರೀಮತಿ ಯಶೋಧರವರು ಗೃಹಿಣಿಯಾಗಿದ್ದಾರೆ.
ಓರ್ವ ಪುತ್ರ ಮತ್ತು ಪುತ್ರಿ ಇಂಜಿನಿಯರ್ ಗಳಾಗಿದ್ದಾರೆ.
ನಿವೃತ್ತಿ ನಂತರವು ಚಂದ್ರಶೇಖರ ಉಪ್ಪಳಿಕೆಯವರು ನ್ಯಾಯಾಂಗ ಇಲಾಖೆಯ ಸೇವೆಯಲ್ಲಿ ಮುಂದುವರೆಯಲಿದ್ದಾರೆ ಎಂದು ತಿಳಿಸಿದ್ದಾರೆ.