ಸಜ್ಜನ ಪ್ರತಿಷ್ಠಾನದ ವತಿಯಿಂದ ಸಜ್ಜನೋತ್ಸವ ಯಾರಾಗುವಿರಿ ಸಜ್ಜನ ಲಕ್‌ಪತಿ ಕಾರ್ಯಕ್ರಮ ಡಾ.ಆರ್ ಕೆ ನಾಯರ್ ಮತ್ತು ಡಾ.ಶಿವರಾಂ ಅವರಿಗೆ ಸಜ್ಜನಸಿರಿ ಪ್ರಶಸ್ತಿ ಪ್ರದಾನ

0

ಸಜ್ಜನ ಪ್ರತಿಷ್ಠಾನದ ಬೀಜದಕಟ್ಟೆ ಇದರ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಸಜ್ಜನೋತ್ಸವ ವಿವಿಧ ಕಾರ್ಯಕ್ರಮ ಜ.೬ ರಂದು ನಡೆಯಿತು.


ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ದೊಡ್ಡ ಕೊಡುಗೆ ನೀಡುವ ಬೀಜದಕಟ್ಟೆಯ ಸಜ್ಜನ ಪ್ರತಿಷ್ಠಾನದ ಕಾರ್ಯ ಶ್ರೇಷ್ಠ ಮತ್ತು ಶ್ಲಾಘನೀಯ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ. ಗೂನಡ್ಕದ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಬೀಜದಕಟ್ಟೆಯ ಸಜ್ಜನ ಸಭಾ ಭವನದಲ್ಲಿ ನಡೆದ ಸಜ್ಜನೋತ್ಸವ ಹಾಗೂ ಸಜ್ಜನ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಮಂಗಳೂರು ಕಾವೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಡಾ.ಶಿವರಾಂ ಅವರಿಗೆ ಸಜ್ಜನ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿವೃತ್ತ ಪ್ರಾಂಶುಪಾಲ ಕೆ.ಆರ್.ಗಂಗಾಧರ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ ಬಡತನವನ್ನು ಪ್ರೀತಿಸಿದರೆ ಬದುಕು ಇಷ್ಟವಾಗುತ್ತದೆ, ನೋವನ್ನು ಪ್ರೀತಿಸಿದರೆ ಸೋಲು ಇಷ್ಟವಾಗುತ್ತದೆ, ಎಲ್ಲರನ್ನೂ ಪ್ರೀತಿಸಿದರೆ ಜಗತ್ತು ಇಷ್ಟವಾಗುತ್ತದೆ' ಎಂದು ಹೇಳಿದರು. ಪತ್ರಕರ್ತ ದುರ್ಗಾಕುಮಾರ್ ನಾಯರ್‌ಕೆರೆ ಅಭಿನಂದನಾ ಭಾಷಣ ಮಾಡಿಸವಾಲುಗಳನ್ನು ಎದುರಿಸಿ ಬೆಳೆಯುವ, ಸಾಧನೆ ಮಾಡುವವರು ನಿಜವಾದ ಸಾಧಕರು’ ಎಂದು ಹೇಳಿದರು.
ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಸನ್ಮಾನಿಸಲಾಯಿತು.


ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು, ಮಾಜಿ ಅಧ್ಯಕ್ಷರಾದ ಜಿ.ಕೆ.ಹಮೀದ್ ಗೂನಡ್ಕ, ಮಹಮ್ಮದ್ ಕುಂಞಿ ಗೂನಡ್ಕ, ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಚಂದ್ರಶೇಖರ ಪೇರಾಲು, ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಗ್ರಾ.ಪಂ.ಸದಸ್ಯರಾದ ವಿಮಲಾ ಪ್ರಸಾದ್, ಅನುಪಮ, ಗೂನಡ್ಕ ಶಾರದಾ ವಿದ್ಯಾಸಂಘದ ಅಧ್ಯಕ್ಷ ರಾಮಚಂದ್ರ ಕಲ್ಲಗದ್ದೆ, ನಿವೃತ್ತ ಮುಖ್ಯೋಪಾಧ್ಯಾಯರಾದ ದಾಮೋದರ ಮಾಸ್ಟರ್, ಚಿದಾನಂದ ಮಾಸ್ಟರ್, ಅರಂತೋಡು ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಮೇಶ್ ಎಸ್., ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಡಾ.ಹಾಜಿ ಎಸ್.ಅಬೂಬಕ್ಕರ್ ಆರ್ಲಪದವು, ಸಿದ್ದಿಕ್ ಕೊಕ್ಕೊ, ರಹಮ್ಮತ್ತುಲ್ಲಾ ಉಡುಪಿ, ಇಬ್ರಾಹಿಂ ಶೀರೂರು ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆದರ್ಶ ದಂಪತಿ ಪ್ರಶಸ್ತಿಯನ್ನು ಲಿಖಿತಾ ಅಬೀರಾ ಮತ್ತು ಮುಖೇಶ್ ದಂಪತಿಗಳು ಪಡೆದುಕೊಂಡರು. ಸಜ್ಜನ ಕಾರ್ಯಕ್ರಮ ಪ್ರಶಸ್ತಿಯನ್ನು ಜನತಾ ಕುಟುಂಬ ಮಿಲನ ಕಾರ್ಯಕ್ರಮದ ಮಜೀದ್‌ರವರು ಪಡೆದುಕೊಂಡರು.


ದಾಮೋದರ ಮಾಸ್ಟರ್ ಸ್ವಾಗತಿಸಿ, ಜಿ.ಕೆ. ಹಮೀದ್ ವಂದಿಸಿದರು. ನೌಫಲ್ ವಿಟ್ಲ ಹಾಗೂ ಶಿಲ್ಪ ಹಾಸನ ಕಾರ್ಯಕ್ರಮ ನಿರೂಪಿಸಿದರು. ಶರೀಫ್ ಜಟ್ಟಿಪಳ್ಳ, ಅಯ್ಯೂಬ್ ಗೂನಡ್ಕ ಸಹಕರಿಸಿದರು.


ಉಚಿತ ಟೀ ಸ್ಟಾಲ್ ಉದ್ಘಾಟನೆ


ಸಜ್ಜನೋತ್ಸವ ಕಾರ್ಯಕ್ರಮಕ್ಕೆ ಅಗಮಿಸುವ ಸರ್ವರಿಗೂ ಸುಳ್ಯದ ಉದ್ಯಮಿ ಸಲೀಂ ಪೆರಂಗೋಡಿಯವರ ವತಿಯಿಂದ ಬೆಳಿಗ್ಗೆಯಿಂದ ರಾತ್ರಿ ವರೆಗೆ ಉಚಿತ ವಿವಿಧ ಬಗ್ಗೆಯ ಟೀ ಮತ್ತು ತಿಂಡಿಗಳನ್ನು ಏರ್ಪಡಿಸಲಾಗಿತ್ತು.
ಟೀ ಸ್ಟಾಲ್‌ನ ಉದ್ಘಾಟನೆಯನ್ನು ಕಾಪುವಿನ ಉದ್ಯಮಿ ರಹ್ಮಾತುಲ್ಲಾ ನೆರವೇರಿಸಿದರು. ಹಾಜಿ ಇಬ್ರಾಹಿಂ ಶಿರೂರ್, ಸುದ್ದಿ ಬಿಡುಗಡೆಯ ಕೃಷ್ಣ ಬೆಟ್ಟ ಮೊದಲಾದವರು ಉಪಸ್ಥಿತರಿದ್ದರು.


ಸಮಾರೋಪ ಮತ್ತು ಬಹುಮಾನ ವಿತರಣೆ


ಸಂಜೆ ನಡೆದ ಸಮಾರೋಪದಲ್ಲಿ ಗ್ರೀನ್ ಹಿರೊ ಆರ್ ಕೆ ನಾಯರ್ ರವರನ್ನು ಸಜ್ಜನ ಸಿರಿ ಪ್ರಶಸ್ತಿ ನೀಡಿ ಅಭಿನಂದಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣವನ್ನು ದುರ್ಗಾಕುಮಾರ್ ನಾಯರ್‌ಕೆರೆ ಮಾಡಿದರು.
ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ರವರು ಸಜ್ಜನ ಲಕ್ ಪತಿ ಕಾರ್ಯಕ್ರಮದ ಲಕ್‌ಪತಿಗಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.
ನಿವೃತ್ತ ಶಿಕ್ಷಕ ಅಬ್ದುಲ್ಲಾ ಮಾಸ್ಟರ್ ಅರಂತೋಡು, ಸುಳ್ಯ ಸ.ಪೂ ಕಾಲೇಜು ಶಿಕ್ಷಕಿ ಶ್ರೀಮತಿ ಹಸೀನಾ, ದ.ಕ ಜಿಲ್ಲಾ ವಕ್ಪ್ ಸಮಿತಿ ಮಾಜಿ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಮೊಗರ್ಪಣೆ, ಸುಳ್ಯ ತಾ.ಕನ್ನಡ ಸಾಹಿತ್ಯ ಪರಿಷತ್ತು ನಿರ್ದೇಶಕ ಪ್ರೊ.ಸಂಜೀವ ಕುದ್ಪಾಜೆ, ಕಾರ್ಯಕ್ರಮದಲ್ಲಿ ಶುಭ ಹಾರೈಸಿದರು. ನಿವೃತ್ತ ಯೋಧ ಕೆ.ಪಿ ಜಗದೀಶ್ ರೈ, ಅನ್ವರ್ ಗೂನಡ್ಕ, ಪುಂಡರಿಕ, ಅನ್ವರ್ ಪುತ್ತೂರು ಮೊದಲಾದವರು ಉಪಸ್ಥಿತರಿದ್ದರು.
ಸಜ್ಜನ ಲಕ್‌ಪತಿಗಳಾಗಿ ಸ್ನೇಹ ಶಾಲೆಯ ವಿದ್ಯಾರ್ಥಿ ಅರವಿಂದ್ ಪ್ರಥಮ ಬಹುಮಾನ ಪಡೆದುಕೊಂಡರು. ದ್ವಿತೀಯ ಬಹುಮಾನವನ್ನು ಅರಂತೋಡು ನೆಹರು ಸ್ಮಾರಕ ಕಾಲೇಜು ವಿದ್ಯಾರ್ಥಿ ಪವನ್ ಪಡೆದು ಕೊಂಡರು.

ಯಾರಾಗುವಿರಿ ಸಜ್ಜನ ಲಕ್‌ಪತಿ ಕಾರ್ಯಕ್ರಮ


ಯಾರಾಗುವಿರಿ ಸಜ್ಜನ ಲಕ್‌ಪತಿ ಕಾರ್ಯಕ್ರಮ ಬೆಳಿಗ್ಗೆ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಇ.ರಮೇಶ್ ಪ್ರಶ್ನೋತ್ತರ ಪೀಠದಲ್ಲಿ ಕುಳಿತು ಕಂಪ್ಯೂಟರ್ ಜೀ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ಲ ನಾವೂರು ಪರಿಕಲ್ಪನೆ ಮತ್ತು ಸಂಯೋಜನೆಯಲ್ಲಿ ನಡೆದ ಯಾರಾಗುವಿರಿ ಸಜ್ಜನ ಲಕ್‌ಪತಿ ಕಾರ್ಯಕ್ರಮವನ್ನು ಮಂಜುನಾಥ್ ಬಂಗ್ಲೆಗುಡ್ಡೆ ನಡೆಸಿ ಕೊಟ್ಟರು. ಫೈನಲ್ ಹಂತ ತಲುಪಿದ ಸ್ಪರ್ಧಾರ್ಥಿ ವಿದ್ಯಾರ್ಥಿಗಳಿಗೆ ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಎಂ ಬಿ ಸದಾಶಿವ ಪ್ರಶ್ನೋತ್ತರ ಕಾರ್ಯಕ್ರಮ ನಡೆಸಿಕೊಟ್ಟರು.


ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಪಾರ್ಮೇಡ್ ಕಂಪನಿಯ ಪ್ರಧಾನ ವ್ಯವಸ್ಥಾಪಕ ಆರಿಸ್ ಪೇರಡ್ಕ, ನಿವೃತ್ತ ಪ್ರಾಂಶುಪಾಲರಾದ ಇಬ್ರಾಹಿಂ ಮಾಸ್ಟರ್, ಗೂನಡ್ಕ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಪಿ.ಎ.ಉಮ್ಮರ್, ಸಂಪಾಜೆ ಗ್ರಾ.ಪಂ.ಉಪಾಧ್ಯಕ್ಷ ಎಸ್.ಕೆ.ಹನೀಫ, ನ.ಪಂ.ಸದಸ್ಯ ಶರೀಫ್ ಕಂಠಿ ಮಾಜಿ ಅಧ್ಯಕ್ಷ ಜಗದೀಶ್ ರೈ, ಬಿ.ಎಸ್.ಯಮುನಾ, ಗ್ರಾ.ಪಂ.ಸದಸ್ಯರಾದ ಶೌವಾದ್ ಗೂನಡ್ಕ, ಪಿ.ಕೆ.ಅಬೂಸಾಲಿ, ಉದ್ಯಮಿ ಸಲೀಂ ಪೆರುಂಗೋಡಿ, ಗೂನಡ್ಕ ಶಾರದಾ ಶಾಲೆಯ ಹನುಮಂತಪ್ಪ.ಜಿ, ಎಸ್.ಆಲಿ ಹಾಜಿ, ಅಬ್ಬಾಸ್ ಹಾಜಿ ಸಂಟ್ಯಾರ್, ಅಶ್ರಫ್ ಗುಂಡಿ, ಉಮ್ಮರ್ ದರ್ಖಾಸ್, ಸಿದ್ದಿಕ್ ಕೊಕ್ಕೋ ಮತ್ತಿತರರು ಉಪಸ್ಥಿತರಿದ್ದರು.