ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಾಲಯದ ಜಾತ್ರೋತ್ಸವ ಪ್ರಯುಕ್ತ ಪೂರ್ವಭಾವಿ ಸಭೆ

0

ಆಡಳಿತಾಧಿಕಾರಿ ನೇಮಕಗೊಂಡು ಎರಡು ತಿಂಗಳು ಕಳೆದರೂ ಇನ್ನೂ ನಡೆಯದ ಅಧಿಕಾರ ಸ್ವೀಕಾರ

ಮಾಜಿ ವ್ಯವಸ್ಥಾಪನ ಸಮಿತಿ – ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ಭಕ್ತಾದಿಗಳ ನೇತೃತ್ವದಲ್ಲಿ ಜಾತ್ರೋತ್ಸವ ನಡೆಸಲು ನಿರ್ಧಾರ

ಸುಳ್ಯದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಾಲಯದ ವರ್ಷಾವಧಿ ಜಾತ್ರೋತ್ಸವವು ಜ.26ರಿಂದ 28ರವರೆಗೆ ನಡೆಯಲಿದ್ದು ಈ ಬಗ್ಗೆ ಭಕ್ತಾದಿಗಳ ಪೂರ್ವಭಾವಿ ಸಭೆಯು ಜ‌.7ರಂದು ದೇವಾಲಯದಲ್ಲಿ ಜರುಗಿತು.

ದೇವಸ್ಥಾನದಲ್ಲಿ ಈ ಹಿಂದೆ ವ್ಯವಸ್ಥಾಪನ ಸಮಿತಿಯ ನೇತೃತ್ವದಲ್ಲಿ ವರ್ಷಾವಧಿ ಜಾತ್ರೋತ್ಸವವು ನಡೆಯುತ್ತಿದ್ದು, ಈ ಬಾರಿ ವ್ಯವಸ್ಥಾಪನ ಸಮಿತಿಯ ಆಡಳಿತ ಅವಧಿಯು ಮುಗಿದಿದ್ದು, ಸರ್ಕಾರದಿಂದ ನೇಮಕಗೊಂಡಿರುವ ನೂತನ ಆಡಳಿತ ಅಧಿಕಾರಿಯವರ ನೇತೃತ್ವದಲ್ಲಿ ಜಾತ್ರೋತ್ಸವ ನಡೆಯಬೇಕಿತ್ತು. ಆದರೆ ನೂತನ ಆಡಳಿತಾಧಿಕಾರಿಯವರು ನೇಮಕಗೊಂಡು ಎರಡು ತಿಂಗಳು ಕಳೆದರೂ, ಇದುವರೆಗೆ ದೇವಾಲಯದ ಆಡಳಿತದ ಅಧಿಕಾರವನ್ನು ವಹಿಸಿಕೊಳ್ಳದೆ ಇದ್ದ ಕಾರಣ ಮಾಜಿ ವ್ಯವಸ್ಥಾಪನ ಸಮಿತಿ , ಬಹ್ಮಕಲಶೋತ್ಸವ ಸಮಿತಿ, ಜೀರ್ಣೋದ್ಧಾರ ಸಮಿತಿ ಮತ್ತು ಊರ ಭಕ್ತಾದಿಗಳ ನೇತೃತ್ವದಲ್ಲಿ ಈ ಬಾರಿಯ ವರ್ಷಾವಧಿ ಜಾತ್ರೋತ್ಸವ ನಡೆಸಲು ತೀರ್ಮಾನಿಸಲಾಯಿತು.

ಇದಕ್ಕಾಗಿ ಜಾತ್ರೋತ್ಸವ ಸಮಿತಿಯನ್ನು ರಚಿಸಲಾಗಿದ್ದು, ಗೌರವಾಧ್ಯಕ್ಷರಾಗಿ ಕೃಷ್ಣ ಕಾಮತ್, ಅಧ್ಯಕ್ಷರಾಗಿ ಪಿ.ಕೆ ಉಮೇಶ್ ಅವರನ್ನು ಆಯ್ಕೆ ಮಾಡಲಾಗಿದ್ದು, ಊರ ಭಕ್ತಾದಿಗಳ ನೇತ್ರತ್ವದಲ್ಲಿ ಜಾತ್ರೆ ನಡೆಸುವುದೆಂದು ನಿರ್ಧರಿಸಲಾಗಿದ್ದು, ಜಾತ್ರೆ ನಡೆಸುವ ಬಗ್ಗೆ ಚರ್ಚಿಸಿ ಆರ್ಥಿಕ ಕ್ರೋಡಿಕರಣ ಮಾಡುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು.

ಸಭೆಯಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷರು , ಸದಸ್ಯರು, ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು , ಸೇವಾ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು. ಎ.ಟಿ. ಕುಸುಮಾಧರ ಸ್ವಾಗತಿಸಿ, ನವೀನ್ ಕುದ್ಪಾಜೆ ವಂದಿಸಿದರು.