ಜ.13 ರಿಂದ ಮಾಪಳಡ್ಕ ಮಖಾಂ ಉರೂಸ್

0

ಸುಳ್ಯ ಜಾಲ್ಸೂರು ಸಮೀಪ ಮಾಪಳಡ್ಕ ದರ್ಗಾಶರಿಫಿನಲ್ಲಿ ಜ.13 ರಿಂದ ಜ.15 ವರೆಗೆ ಮಾಪಳಡ್ಕ ದರ್ಗಾಶರೀಫ್ ವಠಾರದಲ್ಲಿ ನಡೆಯಲಿದೆ.
ಜ.13 ರಂದು ಸಯ್ಯದ್ ಪೂಕುಂಞಿ ತಂಙಳ್ ಅದೂರ್ ಧ್ವಜಾರೋಹಣ ಮತ್ತು ದುವಾಶಿರ್ವಚನ ಕಾರ್ಯಕ್ರಮದೊಂದಿಗೆ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ನೌಫಲ್ ಸಖಾಫಿ‌ ಕಳಸ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಉದ್ಘಾಟನ ಸಮಾರಂಭದ ಅಧ್ಯಕ್ಷತೆಯನ್ನು ಹಾಜಿ ಇಬ್ರಾಹಿಂ ಸಂಕೇಶ್ ನಡೆಸಲಿದ್ದಾರೆ.
ಅಡ್ಕ ಖಿಳರ್ ಮಸೀದಿ ಸದರ್ ಮಹಲ್ಲಿಂ ಮಹಮ್ಮದ್ ಆಲಿ ಮುಸ್ಲಿಯಾರ್ ,ಮೈತ್ತಡ್ಕ ಬಿಲಾಲ್ ಮಸೀದಿ ಸದರ್ ಮಹಲ್ಲಿಂ ಜಿ.ಎಸ್ ಹಸೈನಾರ್ ಬಾಹಸನಿ,ಮಾಪಳಡ್ಕ ದರ್ಗಾ ಸಮಿತಿ ಕೋಶಾಧಿಕಾರಿ ಬಿ ಹೆಚ್ ಹಸೈನಾರ್ ಇರುವಂಬಳ್ಳ ಉಪಸ್ಥಿತರಿರಲಿದ್ದಾರೆ.

ಜ.14 ದ್ಸಿಕ್ರ್ ನೆರ್ಚೆ
ಸಯ್ಯದ್ ಎನ್ ಪಿ ಎಂ ಝೈನುಲ್ ಅಬಿದೀನ್ ತಂಙಳ್ ದುಗಲಡ್ಕ ದ್ಸಿಕ್ರ್ ಹಲ್ಕ ಮತ್ತು ದುವಾ ಕಾರ್ಯಕ್ರಮಕ್ಕೆ ‌ನೇತ್ರತ್ವ ವಹಿಸಲಿದ್ದಾರೆ.
ಅಬೂಭಕ್ಕರ್ ಸಿದ್ದೀಕ್ ಅಝ್ಹರಿ ಪಯ್ಯನ್ನೂರ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಇರುವಂಬಳ್ಳ ಬದ್ರಿಯಾ ಜುಮ್ಮಾ ಮಸೀದಿ ಖತೀಬರಾದ ಅಶ್ರಫ್ ನಹಿಮಿ,ಜಮಾಯತ್ ಕಮಿಟಿ ಉಪಾಧ್ಯಕ್ಷ ಹಸೈನಾರ್ ಹಾಜಿ ಧರ್ಮತ್ತನ್ನಿ,ಇರುಂವಬಳ್ಳ ಜುಮ್ಮಾ ಮಸೀದಿ ಮಹಝ್ಜಿನ್ ಅಬ್ದುಲ್‌ ಖಾದರ್ ಮದನಿ,ಸಂಕೇಶ್ ಫೌಂಡೇಶನ್ ಅಧ್ಯಕ್ಷ ಎಸ್ ಅಬ್ದುಲ್‌ ರಹಿಮಾನ್‌ ಸಂಕೇಶ್ ವೇದಿಕೆಯಲ್ಲಿ ಉಪಸ್ಥಿತರಿರುವರು.

ಜ.15 ಸಮಾರೋಪ ಸಮಾರಂಭ
ಸಮಾರೋಪ ಸಮಾರಂಭದ ದುವಾಶಿರ್ವಚನ ಮತ್ತು ಸಮಾರೋಪ ಸಮಾರಂಭದ ನೇತ್ರತ್ವವನ್ನು ಸಯ್ಯದ್ ಪಝಲ್ ಕೊಯಮ್ಮ ಕೂರತ್ ತಂಙಳ್ ನೀಡಲಿದ್ದಾರೆ.
ಸಿರಾಜುಲ್ ಹುದಾ ಕುಟ್ಯಾಡಿಯ ರಾಶೀದ್ ಬುಖಾರಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಮಾಪಳಡ್ಕ ಮಸೀದಿ ಮುದರಿಸ್ ಹಾಪೀಳ್ ಅಬ್ದುಲ್‌ ಸಲಾಂ ನೀಝಾಮಿ,ಜಮಾಯತ್ ಕಮಿಟಿ ಅಧ್ಯಕ್ಷ ಎ.ಬಿ ಅಶ್ರಫ್ ಸಹದಿ,ಜಮಾಯತ್ ಕಮಿಟಿ ಕಾರ್ಯದರ್ಶಿ ಟಿ ಹೆಚ್ ಮಹಮ್ಮದ್ ಕುಂಞಿ ತುಪ್ಪಕ್ಕಲ್,ಅನ್ವರ್ ಪಂಜಿಕ್ಕಲ್ಲು ಮೊದಲಾದವರು ಉಪಸ್ಥಿತರಿರುವರು.