ಸುಳ್ಯ ಜೂನಿಯರ್ ಕಾಲೇಜ್ ರಸ್ತೆಯಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಮರ

0

ಸುಳ್ಯದ ಜೂನಿಯರ್ ಕಾಲೇಜ್ ರಸ್ತೆಯ ಸದರ್ನ್ ರೆಸಿಡೆನ್ಸಿ ರೆಸ್ಟೋರೆಂಟ್ ಎದುರಿನಲ್ಲಿ ಇರುವ ಮರವೊಂದು ಅಪಾಯಕಾರಿ ಸ್ಥಿತಿಯಲ್ಲಿ ದೆ. ನಿನ್ನೆ ಸುರಿದ ಮಳೆಯ ಪರಿಣಾಮ ಮರದ ಬುಡದಲ್ಲಿರುವ ಕಲ್ಲು ಮಣ್ಣು ಕುಸಿತವಾಗಿ ರಸ್ತೆಯ ಕಡೆ ವಾಲಿಕೊಂಡಿದೆ‌. ಮತ್ತೆ ಗಾಳಿ ಮಳೆ ಬಂತೆಂದರೆ ಮರ ಬೀಳುವ ಸಾಧ್ಯತೆ ಇದೆ.ನಿತ್ಯವೂ ನೂರಾರು ವಾಹನಗಳು ಹಾಗೂ ಪಾದಚಾರಿಗಳು,ವಿದ್ಯಾರ್ಥಿಗಳು ಸಂಚರಿಸುವ ರಸ್ತೆ ಇದಾಗಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ತಕ್ಷಣ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸುವುದು ಸೂಕ್ತವಾಗಿದೆ.