ಕೆ.ವಿ.ಜಿ ಆಯುರ್ವೇದ ಔಷಧ ತಯಾರಿಕಾ ಘಟಕ ಹಾಗೂ ಸಂಶೋಧನಾ ಕೇಂದ್ರದ ಎರಡು ಹೊಸ ಉತ್ಪನ್ನಗಳ ಬಿಡುಗಡೆ

0

ಕೆ.ವಿ.ಜಿ ಆಯುರ್ವೇದ ಕಾಲೇಜಿನಲ್ಲಿ ದಿನಾಂಕ 22.12.2023 ರಂದು ಜರುಗಿದ ಕಾಲೇಜಿನ ವಾರ್ಷಿಕೋತ್ಸವದಂದು ಕೆ.ವಿ.ಜಿ ಆಯುರ್ವೇದ ಔಷಧ ತಯಾರಿಕಾ ಘಟಕ ಹಾಗೂ ಸಂಶೋಧನಾ ಕೇಂದ್ರದಲ್ಲಿ ತಯಾರಿಸಲಾದ ನೂತನ ಉತ್ಪನ್ನಗಳಾದ KVGAP’S ಗ್ಯಾಸ್ಟ್ರೋ ಕೇರ್ ಕ್ಯಾಪ್ಸುಲ್ ಮತ್ತು ಕ್ಷೀರಬಲ ತೈಲ 101 ಆವರ್ತಿ ಗಳನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷರಾದ  ಡಾ. ಕೆ. ವಿ. ಚಿದಾನಂದ, ಮುಖ್ಯ ಅತಿಥಿಗಳಾದ, ಡಾ.ಪ್ರಶಾಂತ್ .ಎ.ಎಸ್, ಡೀನ್, ಫ್ಯಾಕಲ್ಟಿ ಆಫ್ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಬಿಡುಗಡೆಗೊಳಿಸಿದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್  ನ  ಸದಸ್ಯರಾದ ಶ್ರೀ ಜಗದೀಶ್ ಎ ಎಚ್ ಹಾಗೂ ಶ್ರೀ ಧನಂಜಯ ಮದುವೆಗದ್ದೆ, ಕೆ.ವಿ.ಜಿ. ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ. ವಿ,  ಕೆ.ವಿ.ಜಿ. ಆಯುರ್ವೇದ ಔಷಧ ತಯಾರಿಕಾ ಘಟಕ ಹಾಗೂ ಸಂಶೋಧನಾ ಕೇಂದ್ರದ  ಮುಖ್ಯ ಕಾರ್ಯ ನಿರ್ವಾಹಕರಾದ ಡಾ.ಪುರುಷೋತ್ತಮ ಕೆ.ಜಿ. ಹಾಗೂ ವಿದ್ಯಾರ್ಥಿ ಕ್ಷೇಮ ಅಧಿಕಾರಿ ಡಾ. ಹರ್ಷಿತಾ. ಎಂ. ಉಪಸ್ಥಿತರಿದ್ದರು.

KVGAP’S ಗ್ಯಾಸ್ಟ್ರೋ ಕೇರ್ ಕ್ಯಾಪ್ಸುಲ್ ನ ವೈಶಿಷ್ಟತೆ

KVGAP’S ಗ್ಯಾಸ್ಟ್ರೋ ಕೇರ್ ಕ್ಯಾಪ್ಸುಲ್ ಕೆ.ವಿ.ಜಿ ಆಯುರ್ವೇದ ಔಷಧ ತಯಾರಿಕಾ ಘಟಕ ಮತ್ತು ಸಂಶೋಧನಾ ಕೇಂದ್ರದಲ್ಲಿ ಸಂಶೋಧನೆಗೊಂಡ ಆಯುರ್ವೇದ ಔಷಧಿ. ಈ ಔಷಧಿಯು ಯಷ್ಟಿಮಧು, ಅಮೃತಬಳ್ಳಿ ಸತ್ವ, ಶುಂಠಿ, ಹಿಂಗು, ಓಮ, ಕರಿಜೀರಿಗೆ, ಪ್ರವಾಳ ಪಂಚಾಮೃತ ಮುಂತಾದ ನೈಸರ್ಗಿಕ ಘಟಕ ದ್ರವ್ಯ ಗಳಿಂದ ಸಂಪನ್ನವಾಗಿದ್ದು 400mg  ಕ್ಯಾಪ್ಸುಲ್ ರೂಪದಲ್ಲಿ ಲಭ್ಯವಿರುತ್ತದೆ.

ಹೊಟ್ಟೆನೋವು, ಉರಿ, ಉಬ್ಬರ ಇತ್ಯಾದಿ ಗ್ಯಾಸ್ಟ್ರಿಕ್ ಮತ್ತು ಜೀರ್ಣಕೋಶ ಸಂಬಂಧ ಖಾಯಿಲೆಗಳಿಗೆ ಪರಿಣಾಮಕಾರಿಯಾಗಿದ್ದು ಸಂಶೋಧನೆಯಿಂದ ಋಜುವಾತುಗೊಂಡಿದೆ.

ಕ್ಷೀರಬಲ ತೈಲ 101 ಆವರ್ತನ

ಕ್ಷೀರಬಲ 101 ಆವರ್ತಿತ ತೈಲವು ಶಾಸ್ತ್ರೋಕ್ತ ವಿಧಿಯನ್ನು ಅನುಸರಿಸಿ ಬಲಾಮೂಲ (ಕಳಂಗಡಲೆಯ ಬೇರು / Sida Cordifolia Root), ಶುದ್ಧ ಎಳ್ಳೆಣ್ಣೆ  ಹಾಗೂ ಪರಿಶುದ್ಧ ದನದ ಹಾಲಿನಿಂದ 101 ಬಾರಿ ತೈಲಪಾಕ ಆವರ್ತನದಿಂದ ಪರಿಷ್ಕೃತಗೊಂಡ ವಿಶಿಷ್ಟ ಆಯುರ್ವೇದೀಯ ಔಷಧಿ.

ಸಮಸ್ತ ನರಸಂಬಂಧಿ ವಿಕಾರಗಳಿಗೆ ಇದು ಪರಿಣಾಮಕಾರಿ  ಔಷಧ . ನರಮಂಡಲ ಪುನಃಚೇತನ , ನರಗಳ ಪೋಷಣೆ, ಪುಷ್ಠಿದಾಯಕವಾಗಿ ಸಹಕಾರಿ. ಇದು ಅತ್ಯುತ್ತಮ ನೋವು ನಿವಾರಕ ಮತ್ತು ಊತ ನಿವಾರಕವಾಗಿದ್ದು , ವಾತರಕ್ತ, ವಾತ ರೋಗ , ಗಂಟುನೋವು ,ಬಾವು ,ಸೊಂಟನೋವು , ಗೃಧ್ರಸಿ (Sciatica) ಮಾಂಸ ಖಂಡಗಳ ನೋವು, ಮತ್ತು ಸ್ಪಂಡೈಲೋಸಿಸ್, ಹಾಗೂ ಬೆನ್ನೆಲುಬುಗಳ ಸವಕಳಿ ,ಊತ , ಜಾರುವಿಕೆ ,ಬೆನ್ನುಹುರಿಯ ಖಾಯಿಲೆಗಳಿಗೆ ಪರಿಣಾಮಕಾರಿ.