ಜ.7ರಂದು ಪತಂಜಲಿ ಯೋಗ ಕೇಂದ್ರ (ರಿ.) ಇವರು ನಡೆಸಿದ ನ್ಯಾಷನಲ್ ಲೆವೆಲ್ ಯೋಗಾಸನ ಚಾಂಪಿಯನ್ ಶಿಪ್ -2024 ಯೋಗಾ ಸ್ಪರ್ಧೆಯು ಶ್ರೀ ಹೊನ್ನಗಂಗಾ ಕಲ್ಯಾಣ ಭವನ ಮುನೇಶ್ವರ ಲೇಔಟ್ ಲಗ್ಗೇರೆ ಬೆಂಗಳೂರು ಇಲ್ಲಿ ನಡೆಯಿತು. 8-12 ವರ್ಷದ ಬಾಲಕಿಯರ ಯೋಗ ಸ್ಪರ್ಧೆಯಲ್ಲಿ ಸೋನಾ ಅಡ್ಕಾರ್ ರವರು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಈಕೆಯು ಮುಂದೆ ನಡೆಯುವ ಅಂತರಾಷ್ಟ್ರೀಯ ಯೋಗಾಸನ ಚಾಂಪಿಯನ್ ಶಿಪ್-2024 ಮಲೇಶಿಯಾದಲ್ಲಿ ಏಪ್ರಿಲ್ 14, 15, 16 ರಲ್ಲಿ ನಡೆಯುವ ಯೋಗ ಸ್ಪರ್ಧೆಗೆ ಆಯ್ಕೆಯಾಗಿರುತ್ತಾಳೆ. ಇವರು ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿಯಾಗಿದ್ದು ಜಾಲ್ಸೂರು ಗ್ರಾಮದ ಶರತ್ ಅಡ್ಕಾರು ಹಾಗೂ ಶ್ರೀಮತಿ ಶೋಭಾ ಶರತ್ ದಂಪತಿಗಳ ಪುತ್ರಿ. ಇವರು ಯೋಗ ಶಿಕ್ಷಕರಾದ ಸಂತೋಷ್ ಮುಂಡುಕಜೆ ಯೋಗಸೇನಾ ಚಿತ್ತಸ್ಯ ಯೋಗ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ.