ಜ.10 : ಪೆರುವಾಜೆ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

0

ಅಂಗಡಿ ಮುಂಗಟ್ಟುಗಳ ಸ್ಥಳ ಹಾಗೂ ಶಾಮಿಯಾನ ಏಲಂ

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಜ.15 ರಿಂದ ಜ.21 ರವರೆಗೆ ನಡೆಯುವ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತವು ಜ.10 ರಂದು ಬೆಳಿಗ್ಗೆ ಗಂಟೆ 9.30 ಕ್ಕೆ ನಡೆಯಲಿದೆ.
ಜಾತ್ರಾ ಸಂತೆ ಜಾಗ ಏಲಂ
ವಾರ್ಷಿಕ ಜಾತ್ರೋತ್ಸವ ಮತ್ತು ಬ್ರಹ್ಮರಥೋತ್ಸವ ಸಂದರ್ಭದಲ್ಲಿ ಅಂಗಡಿ ಮುಂಗಟ್ಟು ಗಳ ಸ್ಥಳ ಮತ್ತು ಶಾಮಿಯಾನ ಏಲಂ ಬೆಳಿಗ್ಗೆ ಗಂಟೆ 10.30 ಕ್ಕೆ ದೇವಸ್ಥಾನದಲ್ಲಿ ನಡೆಯಲಿದೆ.
ಆಸಕ್ತರು ಏಲಂನಲ್ಲಿ ಭಾಗವಹಿಸಬೇಕೆಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ತಿಳಿಸಿದ್ದಾರೆ.